Monday, September 22, 2025
Google search engine

Homeಸ್ಥಳೀಯಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲೂಕುಗಳಲ್ಲಿ ಭತ್ತ, ರಾಗಿ ಖರೀದಿ ಕೇಂದ್ರ ದಸರಾ ಬಳಿಕ ಆರಂಭ: ದೊಡ್ಡಸ್ವಾಮೇಗೌಡ

ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲೂಕುಗಳಲ್ಲಿ ಭತ್ತ, ರಾಗಿ ಖರೀದಿ ಕೇಂದ್ರ ದಸರಾ ಬಳಿಕ ಆರಂಭ: ದೊಡ್ಡಸ್ವಾಮೇಗೌಡ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಭತ್ತ ಮತ್ತು ರಾಗಿ ಖರೀದಿ ಕೇಂದ್ರವನ್ನು ದಸರಾ ಮುಗಿದ ಬಳಿಕ ಪ್ರಾರಂಭಿಸಲಾಗುವುದು ಎಂದು ಎಂ.ಡಿ.ಸಿ.ಸಿ.ಬ್ಯಾಂಕ್ ನಿರ್ಧೆಶಕ ದೊಡ್ಡಸ್ವಾಮೇಗೌಡ ಹೇಳಿದರು.

ಅವರು ಸಾಲಿಗ್ರಾಮ ತಾಲೂಕಿನ ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಭತ್ತ ಮತ್ತು ರಾಗಿ ಖರೀದಿ ಕೇಂದ್ರವನ್ನು ಎಂ.ಎಸ್.ಪಿ.ಮೂಲಕ ಖರೀದಿಸುವ ಬದಲಿಗೆ ನಮ್ಮದೇ ಆದ ಅಂದರೆ ರೈತರ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಖರೀದಿ ಕೇಂದ್ರ ತೆರಯಲು ಈಗಾಗಲೇ ಚರ್ಚಿಸಿ ಹೋಬಳಿಗೆ ಎರಡು ಖರೀದಿ ಕೇಂದ್ರ ತೆರಳುವಂತೆ ಆದೇಶ ನೀಡಿದೆ ಈ ಹಿನ್ನೆಲೆಯಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನಲ್ಲಿರುವ 24 ಸಹಕಾರ ಸಂಘಗಳ ಪೈಕಿ‌12 ಸಹಕಾರ ಸಂಘಗಳಿಗೆ ಭತ್ತ ಮತ್ತು ರಾಗಿ ಖರೀದಿ ಕೇಂದ್ರವನ್ನು ತೆರಯ ಬಹುದಾಗಿದೆ ಎಂದರು.

ಈಗಿರುವ 24 ಸಹಕಾರ ಸಂಘಗಳಲ್ಲಿ ಪೈಕಿ ಯಾವ ಸೊಸೈಟಿಯಲ್ಲಿ ಪಡಿತರ ಮಾರಾಟದ ವ್ಯವಸ್ಥೆ ಇದೆ ಅಂತಹ ಸೊಸೈಟಿಗಳಿಗೆ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ಕೊಡಲು ಸಾದ್ಯವಿಲ್ಲ ಎಂದು ಸ್ಪಷ್ಟಪಡಿಸಿದ ದೊಡ್ಡಸ್ವಾಮೇಗೌಡರು ಪಡಿತರ ಮಾರಾಟದ ವ್ಯವಸ್ಥೆ ಇಲ್ಲದ ಸೊಸೈಟಿಗಳಿಗೆ ಖರೀದಿ ಕೇಂದ್ರ ಪ್ರಾರಂಬಿಸ ಬಹುದಾಗಿದ್ದು ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ಪ್ರಾರಂಬಿಸಲು ಅನುಮತಿ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಇದರಿಂದಾಗಿ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗುವುದರ ಜೊತೆಗೆ ಹತ್ತಾರು ಯುವಕರಿಗೆ ಉದ್ಯೋಗ ನೀಡಿದಂತಾಗುತ್ತದೆ, ಸೊಸೈಟಿಗಳು ಸಹ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದ ಅವರು ಮುಂದಿನ ದಿನಗಳಲ್ಲಿ ಹೊಸ ಸದಸ್ಯರಿಗೆ ಸಾಲ ಕೊಡಲು ನೂತನ ಆಡಳಿತ ಮಂಡಳಿ ರಚನೆಯಾದ ಮೇಲೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹರದನಹಳ್ಖಿ ಸೊಸೈಟಿ ಮಾದರಿಯಾಗಿ ಪ್ರಥಮ ಸ್ಥಾನವನ್ನು ಹೊಂದಿತ್ತ ಆದರೆ ಒಬ್ಬ ನೌಕರ ಮಾಡಿದ ತಪ್ಪಿಗೆ 1.40 ಕೋಟಿ ನಷ್ಟದಲ್ಲಿದ್ದು ಸೊಸೈಟಿಯ ಲಾಭಾಂಶವಿಲ್ಲದಂತಾಗಿದೆ ಹಾಗಾಗಿ ಸಹಕಾರ ಸಂಘದ ಅಭಿವೃದ್ಧಿಗಾಗಿ .ಮತ್ತು ರೈತರ. ಏಳಿಗಾಗಿ ಅತಿ ಶೀಘ್ರದಲ್ಲಿ ಗೊಬ್ಬರ ಮಾರಾಟಕ್ಕೆ ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಇದಕ್ಕೂ ಮೊದಲು ಸಹಕಾರ ಸಂಘದ ಅಧ್ಯಕ್ಷ ಹಾಗೂ ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ಹೆಚ್.ಎನ್.ವಿಜಯ್ ಮಾತನಾಡಿ ಸಂಘವು 12 ಕೋಟಿ ವಹಿವಾಟು ನಡೆಸುವ ಮೂಲಕ 1.32 ಲಕ್ಷ ನಿವ್ವಳ ಲಾಭ ಹೊಂದಿದೆ ಎಂದು ಸಭೆಯಲ್ಲಿ ಮಂಡಿಸಿದರು. ಸಂಘದಲ್ಲಿ ಒಟ್ಟು 2761 ಶೇರುದಾರ ಸದಸ್ಯರಿದ್ದು 857 ಸದಸ್ಯರಿಗೆ ಕೆಸಿಸಿ ಸಾಲ, ತಂಬಾಕು ಮತ್ತು ,ಸೌದೆಸಾಲ, ಹಸು ಸಾಕಾಣಿಕೆ ಶೆಡ್ ಸಾಲ, ಮಧ್ಯಮಾವದಿ ಸಾಲ ವಿತರಣೆ ಮಾಡಲಾಗಿದೆ ಎಂದರು.

ಸಂಘದ ಅಭಿವೃದ್ಧಿಗಾಗಿ ಹೊಸ ರೈತರಿಗೆ ಸಾಲವನ್ನು ನೀಡುವಂತೆ ಹಾಗೂ ಸೊಸೈಟಿಯ ಮುಂಬಾಗ ವಾಣಿಜ್ಯ ಮಳಿಗೆ ನೀರ್ಮಿಸಲು ಸಹಕರಿಸುವಂತೆ ಎಂ.ಡಿ.ಸಿ.ಸಿ.ಬ್ಯಾಂಕ್ ನಿರ್ಧೆಶಕ ದೊಡ್ಡಸ್ವಾಮೇಗೌಡರಿಗೆ ಮನವಿ ಮಾಡಿದರು.

ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರು ಕೆಲವೊಂದು ಸಮಸ್ಯೆಗಳನ್ನು ಹೇಳಿದ್ದಿರಿ ಅದರಂತೆ ನಿರ್ಧೆಶಕರ ಜೊತೆ ಸಭೆಯಲ್ಲಿ ಚರ್ಚಿಸಿ ಕ್ರಮ ವಹಿಸುತ್ತೇನೆ ಎಂದು ಮಾಹಿತಿ‌ ನೀಡಿದರು.

ಇದೇ ಸಂದರ್ಭದಲ್ಲಿ ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ಧೆಶಕ ದೊಡ್ಡಸ್ವಾಮೇಗೌಡ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಏಲಕ್ಕಿ ಹಾರಹಾಕಿ ಅಭಿನಂದಿಸಲಾಯಿತು.

ಉಪಾಧ್ಯಕ್ಷ ಬೆಟ್ಟಹಳ್ಳಿ ಯೋಗೇಶ್, ನಿರ್ಧೆಶಕರಾದ ಟಿ‌.ರಾಮೇಗೌಡ, ಕೆಡಗ ನಟರಾಜು, ಸಿ‌.ಸುಂದರ್, ಎಸ್.ಶಂಕರ್, ರವಿ, ಟಿ.ರವಿ, ಕುಮಾರ್, ಲೋಕೇಶ್, ಜಾನಕಿ, ಮಹದೇವಮ್ಮ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಬಸವರಾಜು, ತಾ.ಪಂ.ಮಾಜಿ ಅಧ್ಯಕ್ಷ ಹೆಚ್.ಟಿ.ಮಂಜಪ್ಪ,
ಗ್ರಾ.ಪಂ.ಅಧ್ಯಕ್ಷ ಗೋಪಾಲ್, ಸದಸ್ಯರಾದ ಕಾಳಮ್ಮನಕೊಪ್ಪಲು ಕೃಷ್ಣೇಗೌಡ, ಪಶುಪತಿ ಮಹೇಂದ್ರ, ಸಹಕಾರ ಸಂಘದ ಪ್ರಭಾರ ಸಿಇಓ ಎಸ್.ಎಸ್. ದುಶ್ಯಂತ್, ಸಿಬ್ಬಂದಿಗಳಾದ ಸಂಪತ್ ಕುಮಾರ್, ಪುಷ್ಪಲತಾ, ಅಶೋಕ, ಹೆಚ್.ಬಿ.ಪ್ರಭು ಸೇರಿದಂತೆ ಅನೇಕರು ಇದ್ದರು.

ಚಿತ್ರಶೀರ್ಷಿಕೆ : ಸಾಲಿಗ್ರಾಮ ತಾಲೂಕಿನ ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಎಂ.ಡಿ.ಸಿ.ಸಿ.ಬ್ಯಾಂಕ್ ನಿರ್ಧೆಶಕ ದೊಡ್ಡಸ್ವಾಮೇಗೌಡ ಅಭಿನಂದಿಸಲಾಯಿತು.

RELATED ARTICLES
- Advertisment -
Google search engine

Most Popular