ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಎಸ್.ಜಿ.ಅನಿತಾ ಕಾಂತರಾಜು ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸೋಮಶೇಖರ್ (ದೊರೆ) ಚುನಾಯಿತರಾಗಿದ್ದಾರೆ.
ಹೊಸೂರು: ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಎಸ್.ಜಿ.ಅನಿತಾ ಕಾಂತರಾಜು ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸೋಮಶೇಖರ್ (ದೊರೆ) ಚುನಾಯಿತರಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಎಸ್.ಜಿ.ಅನಿತಾ ಕಾಂತರಾಜು ಮತ್ತು ಸವಿತಾ ಕುಚೇಲ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಎಸ್.ಜಿ.ಅನಿತಾ ಕಾಂತರಾಜು 11 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರೆ ಇವರ ಪ್ರತಿಸ್ಪರ್ಧಿ ಸವಿತಾ ಕುಚೇಲ ಅವರು 5 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಒಂದು ಮತವು ಅಸಿಂಧುಗೊಂಡಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸೋಮಶೇಖರ್ (ದೊರೆ) ಮತ್ತು ರವಿ ನಾಮಪತ್ರಗಳನ್ನು ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಸೋಮಶೇಖರ್ (ದೊರೆ) 12 ಮತಗಳನ್ನು ಪಡೆದು ಆಯ್ಕೆಗೊಂಡರೆ ಇವರ ಪ್ರತಿಸ್ಪರ್ಧಿ ರವಿ ಅವರು 5 ಮತಗಳನ್ನು ಪಡೆದು ಸೋಲುಂಡಿದ್ದಾರೆ.
ಚುನಾವಣೆ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸನ್ನ ಅವರು ಕಾರ್ಯನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎಸ್.ಜಿ.ಅನಿತಾ ಕಾಂತರಾಜು, ಸವಿತಾ ಕುಚೇಲ, ಸೋಮಶೇಖರ್ (ದೊರೆ), ರವಿ, ಸುನಿತಾ ದಿನೇಶ್, ಕೃಷ್ಣಪ್ಪ, ಸುನೀತಾ ಯುವರಾಜ್, ಮಣಿ ಅಂಬರೀಶ್, ಚೈತ್ರಸುರೇಶ್, ರಾಜೇಶ್ವರಿ ಲೋಕೇಶ್, ಗಿರಿಜಾ ಪ್ರಕಾಶ್, ಧನಲಕ್ಷ್ಮಿ ಶಿವರಾಜ್, ಮಣಿಯಮ್ಮರಾಜಣ್ಣ, ಅಶ್ವಥ್ ಮಾಸ್ಟರ್, ಮಾದಯ್ಯ, ರಾಮಚಂದ್ರು, ಶೀಲಾನಾಗಣ್ಣ, ಪಿಡಿಓ ಪುಟ್ಟೇಗೌಡ ಪಾಲ್ಗೊಂಡಿದ್ದರು.