Monday, September 22, 2025
Google search engine

Homeಅಪರಾಧಕಾನೂನುಬಸವ ಜಯಮೃತ್ಯುಂಜಯ ಸ್ವಾಮೀಜಿಯ ಉಚ್ಚಾಟನೆಯ ಬಳಿಕ ಮಠಕ್ಕೆ ಬೀಗ; ಪೊಲೀಸರಿಂದ ಬಿಗಿ ಭದ್ರತೆ

ಬಸವ ಜಯಮೃತ್ಯುಂಜಯ ಸ್ವಾಮೀಜಿಯ ಉಚ್ಚಾಟನೆಯ ಬಳಿಕ ಮಠಕ್ಕೆ ಬೀಗ; ಪೊಲೀಸರಿಂದ ಬಿಗಿ ಭದ್ರತೆ

ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಉಚ್ಚಾಟನೆ ಮಾಡಿದ ಬೆನ್ನಲ್ಲೆ ಮಠಕ್ಕೆ ಬೀಗ ಜಡಿಯಲಾಗಿದೆ.

ಕಳೆದ ಹಲವು ದಿನಗಳಿಂದ ಈ ವಿಚಾರದಲ್ಲಿ ರಾಜಕೀಯ ಜಟಾಪಟಿ ಜೋರಾಗಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಭಾನುವಾರ ಪಂಚಮಸಾಲಿ ಟ್ರಸ್ಟ್ ನ ಕಾರ್ಯಕಾರಿಣಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲಾಗಿತ್ತು.

ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಇನ್ಮುಂದೆ ಅವರಿಗೆ ಹಾಗೂ ಈ ಪೀಠಕ್ಕೂ ಯಾವುದೇ ಸಂಬಂಧವಿಲ್ಲ.. ಅವರಿಗೆ ಸ್ವಾಭಿಮಾನ, ಸಂಸ್ಕಾರವಿದ್ದರೆ ಈ ಮಠಕ್ಕೆ ಬಾರಬಾರದು ಎಂದು ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ತಿಳಿಸಿದ್ದಾರೆ.

ಅಲ್ಲದೇ, ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಿಡಿ ಎಲ್ಲೆಲ್ಲಿ ಹೋಗಿವೆ ಅವೆಲ್ಲವನ್ನೂ ಬೆಳಕಿಗೆ ತರುತ್ತೇವೆ. ಅಷ್ಟೇ ಅಲ್ಲ, ಸಮಯ ಬಂದಾಗ ಸ್ವಾಮೀಜಿ ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಲ್ಲಾ ದಾಖಲೆಗಳನ್ನು ಹುಡುಕುತ್ತೇವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡುತ್ತಿದ್ದಂತೆ ಮಠಕ್ಕೆ ಬೀಗ ಹಾಕಲಾಗಿದೆ. ಪೀಠದೊಳಗಿನ ವಿದ್ಯುತ್ ದ್ವೀಪ ಮಾತ್ರ ಆನ್ ಆಗಿವೆ. ಪೀಠದ ಕಡೆ ಯಾರೂ ಸುಳಿದಿಲ್ಲ. ಪೀಠ ಲಾಕ್ ಮಾಡಿಕೊಂಡು ಟಸ್ಟ್‌ ಸಿಬ್ಬಂದಿ ಹೋಗಿದ್ದಾರೆ.

RELATED ARTICLES
- Advertisment -
Google search engine

Most Popular