Tuesday, September 23, 2025
Google search engine

Homeಅಪರಾಧಬೆಳಗಾವಿಯಲ್ಲಿ ಭರ್ಜರಿ ಗಾಂಜಾ ಬೇಟೆ: ಕಬ್ಬಿನ ಗದ್ದೆಯಲ್ಲಿ ಬೆಳೆದ 441 ಕೆಜಿ ಗಾಂಜಾ ಜಪ್ತಿ

ಬೆಳಗಾವಿಯಲ್ಲಿ ಭರ್ಜರಿ ಗಾಂಜಾ ಬೇಟೆ: ಕಬ್ಬಿನ ಗದ್ದೆಯಲ್ಲಿ ಬೆಳೆದ 441 ಕೆಜಿ ಗಾಂಜಾ ಜಪ್ತಿ

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ : ಬೆಳಗಾವಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಬೆಳೆದಿದ್ದ 441 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿಯ ಸೈಬರ್ ಮತ್ತು ರಾಯಭಾಗ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 22 ಲಕ್ಷ ಮೌಲ್ಯದ 441 ಕೆಜಿ ಗಾಂಚಾ ಜತ್ತಿ ಮಾಡಿದ್ದಾರೆ.

ಬಂಧಿತ ಆರೋಪಿಯನ್ನು ಸಿಂಗಾಡಿ ಹಿರೇಕೋಡಿ (45) ಎಂದು ತಿಳಿದುಬಂದಿದೆ. ನಿಡುಗುಂದಿ ಗ್ರಾಮದ ಬಳಿ ಜಮೀನಿನಲ್ಲಿ ಆರೋಪಿ ಗಾಂಜಾ ಬೆಳೆದಿದ್ದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಯುವಕರೇ ಈತನ ಟಾರ್ಗೆಟ್ ಆಗಿದ್ದಾರೆ. ಒಂದು ಎಕರೆ ಕಬ್ಬಿನ ಗದ್ದೆಯಲ್ಲಿ ಸಿಂಗಾಡಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ.

ಅಂದಾಜು 22 ಲಕ್ಷ ರೂಪಾಯಿ ಮೌಲ್ಯದ ಸುಮಾರು 441 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಆರೋಪಿ ಸಿಂಗಾಡಿ ಹಿರೇಕೋಡಿಯನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಜಂಟಿ ಕಾರ್ಯಾಚರಣೆಗೆ ಬೆಳಗಾವಿ ಎಸ್ಪಿ ಡಾ.ಭೀಮಶಂಕರ್ ಗುಳೇದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular