Thursday, September 25, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ: ಹೊಸೂರು ಹಾಲು ಉತ್ಪಾದಕರ ಸಂಘಕ್ಕೆ ₹7.82 ಲಕ್ಷ ಆದಾಯ: ಯದು ಕುಮಾರ್

ಕೆ.ಆರ್.ನಗರ: ಹೊಸೂರು ಹಾಲು ಉತ್ಪಾದಕರ ಸಂಘಕ್ಕೆ ₹7.82 ಲಕ್ಷ ಆದಾಯ: ಯದು ಕುಮಾರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: 2024 25 ನೇ ಸಾಲಿಗೆ ಹೊಸೂರು ಹಾಲು ಉತ್ಪಾದಕರ ಸಂಘವು 7. 82 ಲಕ್ಷ ರೂ ಆದಾಯ ಗಳಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಯದು ಕುಮಾರ್ ಹೇಳಿದರು.

ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘವು ನಿರಂತರವಾಗಿ ಗುಣಮಟ್ಟದ ಹಾಲು ಶೇಖರಣೆ, ಸಮಯಕ್ಕೆ ಸರಿಯಾಗಿ ರೈತರಿಗೆ ಹಣವಿತರಣೆಯಲ್ಲಿ ಮುಂದಿದ್ದು ಸಂಘದ ವತಿಯಿಂದ ಸುಮಾರು 2.44 ಕೋಟಿ ರೂಗಳ ವಹಿವಾಟು ನಡೆಸಿದ್ದು ಹಾಲು ಸರಬರಾಜು ಮಾಡಿದ ರೈತರಿಗೆ ಸುಮಾರು 3.03ಲಕ್ಷ ರೂ ಗಳ ಬೋನಸ್ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಂಘದ ಹಿಂದಿನ ಕಾರ್ಯದರ್ಶಿಗಳಿಂದ ಹಣ ದುರುಪಯೋಗ ಮತ್ತು ಅಕ್ರಮದ ಕುರಿತು ದಾವೇಗಳನ್ನು ಹಾಕಿದ್ದು ವಸೂಲಿ ಮಾಡುವ ಹಾಗೂ ಖಾಯಂ ಕಾರ್ಯದರ್ಶಿ ನೇಮಕದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ನಾಲ್ಕು ಮಂದಿ ರೈತರಿಗೆ ಮತ್ತು ಗ್ರಾಮದ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರಸನ್ನ ನಿರ್ದೇಶಕರಾದ ಪರಶುರಾಮ ಸ್ವಾಮಿ, ಬುದ್ಧಿಸಾಗರ್ ರಮೇಶ ರಂಗೇ ಗೌಡ ನಾಗರಾಜು ಪೂರ್ಣಿಮಾ ಲಲಿತ ಭಾರತಿ ಸಂಘದ ಮೈಮುಲ್ ಮೇಲ್ವಿಚಾರಕ ನಾಗರಾಜು, ಸಿಇಒ ಶಿವಶಂಕರ ಪರೀಕ್ಷಕ ಡೈರಿ ಮಹದೇವ , ಸಂಘದ ಮಾಜಿ ಕಾರ್ಯದರ್ಶಿ ಮರೀಗೌಡ
ಮುಖಂಡರಾದ ರಮೇಶ್. ಬಿ, ಶ್ರೀನಿವಾಸ್, ವಕೀಲ ಪಣಿತ, ಸುದರ್ಶನ್, ಶಿವು ಸೇರಿದಂತೆ ಮತ್ತಿತರರು ಹಾಜರಿದ್ದರು.


RELATED ARTICLES
- Advertisment -
Google search engine

Most Popular