ಇದೇ ತಿಂಗಳು ಸೆಪ್ಟೆಂಬರ್ 28ರಂದು ಭಾನುವಾರದಂದು ರಾಜ್ಯಾದ್ಯಂತ ಎಎಪಿ ಪಕ್ಷ “ಒಂದು ದಿನ ಭಗತ್ ಗಾಗಿ” ಎಂಬ ಶಿರ್ಷಿಕೆ ಅಡಿಯಲ್ಲಿ ಅವರ ಜನ್ಮದಿನಾಚರಣೆ ಆಚರಣೆ ಮಾಡಲಿದೆ.
ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಅಂದು ಪಕ್ಷದ ಕಛೇರಿಯಲ್ಲಿ ಭಗತ್ ಸಿಂಗ್ ಪೋಟೋ ಮಾಲಾರ್ಪಣೆ , ಆಯ್ದ ಕೆಲವು ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವುದು,ಶಾಲಾ,ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಲ್ಲಿ ಭಗತ್ ಸಿಂಗ್ ವಿಚಾರ, ಪರಾಕ್ರಮ, ಜಾಗೃತಿ ಮೂಡಿಸುವುದು, ಆಕಾಶವಾಣಿ, ಟಿವಿ ಮಾಧ್ಯಮ,ಪತ್ರಿಕೆ ಸಂವಾದ, ಬೈಕ್ ರ್ಯಾಲಿ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ, ಜೊತೆಗೆ ಅಂದು ಎಲ್ಲರೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಾಟ್ಸಪ್, ಫೇಸ್ಬುಕ್, ಇನ್‌ಸ್ಟಾಗ್ರಾಮನಲ್ಲಿ, ಎಕ್ಸ್ ಖಾತೆಗಳಲ್ಲಿ ತಮ್ಮ ತಮ್ಮ ಡಿಪಿಗಳ ಪೋಟೋ ಬದಾಲಾಯಿಸಿ ಇಡೀ ದಿನ ಭಗತ್ ಸಿಂಗ್ ಫೋಟೋ ಹಾಕಿ ಅವರ ತ್ಯಾಗ, ಧೈರ್ಯ, ಪರಾಕ್ರಮ ಹಾಗೂ ವಿಚಾರಗಳ ಬಗ್ಗೆ ಸಹಾನುಭೂತಿ ತೋರಿಸಿ ಅವರನ್ನು ಸ್ಮರಿಸಬೇಕು ,ನಿಮ್ಮ ಸ್ಟೇಟಸ್ ನಲ್ಲಿ ಹಾಕಿಕೊಂಡು ಸಹಕರಿಸಿ ಜೊತೆಗೆ ನೀವು ಕೂಡ ಪಾಲ್ಗೊಳ್ಳಿ ಎಂದು ಎಎಪಿ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ.