ಕೊಡಗು : ಕೊಡಗಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಸಾರಿಗೆ ಬಸ್ ಹಾಗು ಜೆಸಿಬಿ ಮುಖಾಮುಖಿ ಡಿಕ್ಕಿಯಾಗಿ 15 ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಲನಗರ ತಾಲೂಕಿನ ಮಾದಪಟ್ಟಣ ಬಳಿ ಒಂದು ಘಟನೆ ನಡೆದಿದೆ.
ಘಟನೆಯಲ್ಲಿ ಹೋಂಗಾರ್ಡ್ಸ್ ಸೇರಿದಂತೆ 15 ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಮಡಿಕೇರಿ ದಸರಾ ಡ್ಯೂಟಿಗೆ ಹೋಂ ಗಾರ್ಡ್ಸ್ ತೆರಳುತ್ತಿದ್ದರು. ಈ ವೇಳೆ ಸಾರಿಗೆ ಬಸ್ ಜೆಸಿಬಿ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭಾವಿಸಿದೆ. ಕೂಡಲೇ ಗಾಯಳುಗಳನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.