Saturday, September 27, 2025
Google search engine

Homeರಾಜ್ಯಸುದ್ದಿಜಾಲಶಿಕ್ಷಣದ ಪ್ರಯೋಗಾಲಯವೇ ರಂಗಭೂಮಿ : ಬಾಬಾ ಸಾಹೇಬ ಕಾಂಬಳೆ

ಶಿಕ್ಷಣದ ಪ್ರಯೋಗಾಲಯವೇ ರಂಗಭೂಮಿ : ಬಾಬಾ ಸಾಹೇಬ ಕಾಂಬಳೆ

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ : ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಕನ್ನಡ ಸಂಘ ಹಾಗೂ ಐಕ್ಯೂಎಸಿ ಅಡಿಯಲ್ಲಿ ಪಠ್ಯದಲ್ಲಿ ರಂಗ ಚಟುವಟಿಕೆಗಳು – ಶಿಕ್ಷಣದಲ್ಲಿ ರಂಗಭೂಮಿಯ ಮಹತ್ವತೆ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಹಿರಿಯ ರಂಗಕರ್ಮಿ, ನಟ, ನಿರ್ದೇಶಕ ಹಾಗೂ ನಾಟಕ ರಚನಾಕಾರ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಬಾಸಾಹೇಬ ಕಾಂಬಳೆ ಅವರು,
ಸ್ವಾತಂತ್ರ್ಯ ಚಳವಳಿಗಳಿಗೆ ರಂಗಭೂಮಿ ಅಪಾರ ಕೊಡುಗೆಯನ್ನು ನೀಡಿದೆ. ರಂಗಭೂಮಿಯಲ್ಲಿ ಸತ್ಯದ ಹುಡುಕಾಟ ನಡೆಯುತ್ತಿರುತ್ತದೆ.

ಈ ಹುಡುಕಾಟದ ಮಾರ್ಗವೇ ಶಿಕ್ಷಣ. ಶಿಕ್ಷಣ ಮತ್ತು ರಂಗಭೂಮಿ ಮೂಲಕ ಕ್ರಾಂತಿ ಮಾಡಿ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಿದೆ. ನಶಿಸಿ ಹೋಗುತ್ತಿರುವ ರಂಗಭೂಮಿ ಯ ಉಳಿಯುವಿಕೆ ಶಿಕ್ಷಣ ರಂಗದಲ್ಲಿದೆ. ರಂಗಕಲೆ ಎನ್ನುವುದು ಕೇವಲ ವೇದಿಕೆ ಮೇಲೆ ಸಂಭಾಷಣೆ ಹೇಳುವುದಲ್ಲ. ಅದು ಜೀವನದ ಎಲ್ಲ ಕ್ಷೇತ್ರದಲ್ಲಿ ಆವರಿಸಿರುತ್ತದೆ. ಶಿಕ್ಷಕರು ಪ್ರಪಂಚದ ಎಲ್ಲ ಸ್ತರದ ವ್ಯಕ್ತಿಗಳೊಡನೆ ಸಂವಾದಿಸಬೇಕು, ಆಳವಾದ ಅಧ್ಯಯನ ವ್ಯಾಪಕವಾದ ಸಂಚಾರ ಮಾಡ ಬೇಕು . ಶಿಕ್ಷಣದ ಮೂಲ ತತ್ವ ಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವ ಅದ್ಭುತ ಶಕ್ತಿ ರಂಗಭೂಮಿಗೆ ಇದೆ. ರಂಗಭೂಮಿ ಶಿಕ್ಷಕರ ನಿಜವಾದ ಬದುಕಾಗಿದೆ.

ರಂಗಭೂಮಿ ನಿಡುವ ಅಪಾರವಾದ ಸಾಹಿತ್ಯ ಹಾಗೂ ಅನುಭವವನ್ನು ಸ್ವೀಕರಿಸಿ ಒಬ್ಬ ಪರಿಪೂರ್ಣ ಶಿಕ್ಷಕರಾಗಬೇಕೆಂದು ಹೇಳಿದರು. ಶಿಕ್ಷಕರಲ್ಲಿ ಅಂತರ್ಗತವಾಗಿರುವ ಕಲಾತ್ಮಕವಾಗಿರುವ ಪ್ರತಿಭೆಯನ್ನು ಪ್ರದರ್ಶಿಸಿದೇ ಇದ್ದರೆ ಅವರ ಜೀವನ ಕಾರ್ಯ ನಿರರ್ಥಕವಾಗುತ್ತದೆಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯೆ, ರಂಗಕರ್ಮಿ ಹಾಗೂ ಲೇಖಕಿ ಡಾ.ನಿರ್ಮಲಾ ಜಿ ಬಟ್ಟಲ ಅವರು, ಬಾಬಾ ಸಾಹೇಬ ಕಾಂಬಳೆ ಅವರ ಜೀವನ ಹಾಗೂ ಸಾಧನೆಗಳನ್ನು ಮುಕ್ತವಾಗಿ ಪ್ರಶಂಸಿಸಿದರು. ನಮ್ಮ ಅಂತರಂಗ ಹಾಗೂ ಬಹಿರಂಗ ಪರಿಶುದ್ಧಗೊಳ್ಳಬೇಕಾದರೆ ರಂಗಭೂಮಿಯ ಜ್ಞಾನ ಅವಶ್ಯಕ. ಶಿಕ್ಷಕರಲ್ಲಿ ಭಾಷೆ ಹಾಗೂ ಭಾವ ಪ್ರಕಾಶಿಕೆ ಸುಂದರಗೊಳ್ಳಬೇಕಾದರೆ ಶಿಕ್ಷಣದಲ್ಲಿ ರಂಗಭೂಮಿ ಮಹತ್ವ ಹೆಚ್ಚಾಗಿದೆಂದು ಹೇಳಿದರು.

ಬಾಬಾಸಾಹೇಬ ಕಾಂಬಳೆ ಅವರನ್ನು ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.
ಸಂಜೆಯವರೆಗೆ ಡಾ.ನಿರ್ಮಲಾ ಬಟ್ಟಲ ರವರ ನೇತೃತ್ವದಲ್ಲಿ ರಂಗಭೂಮಿ ಕುರಿತು ಕಾರ್ಯಾಗಾರ ನಡೆಯಿತು.

ಪ್ರಶಿಕ್ಷಣಾರ್ಥಿ ಮುಸ್ಕಾನ ಲಾಡನ್ನವರು ಪ್ರಾರ್ಥಿಸಿದರು, ಡಾ.ಎಸ್.ವಿ.ವಾಲಿಶೆಟ್ಟಿ ಸ್ವಾಗತಿಸಿ ಪರಿಚಯಿಸಿದರು. ಪ್ರೊ.ಮಂಜುನಾಥ ಕಲಾಲ ನಿರೂಪಿಸಿದರು. ಪ್ರೊ.ಸೋನಲ್ ಚಿನಿವಾಲ, ಡಾ. ಗೀತಾ ದಯಣ್ಣವರ, ಪ್ರೊ. ಸುನಿಲ ಪಾಣಿ, ಪ್ರೊ.ಮಲ್ಲಿಕಾರ್ಜುನ ಜಮಖಂಡಿ ಹಾಗೂ ದ್ವಿತೀಯ , ನಾಲ್ಕನೇ ಸೆಮಿಸ್ಟರ್ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎಂ.ಇಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular