ಮೈಸೂರು: ಈ ಬಾರಿ ದಸರಾ ಉತ್ಸವದ ಬಂದೋಬಸ್ತ್ ಕಾರ್ಯದಲ್ಲಿ ಮಹಿಳಾ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಮೈಸೂರು ಪೊಲೀಸ್ ಇಲಾಖೆಯ ಕೆಲಸ ಸಾರ್ವಜನಿಕರಿಗೆ ಸಹಾಯವಾಗಿರುತ್ತದೆ. ಆದರೆ ಪ್ರತೀ ವರ್ಷ ದಸರಾ ಜಂಬೂ ಸವಾರಿ ಹೊರಟ ಕೂಡಲೇ ಬಹುತೇಕ ಪೋಲೀಸರು ಸಹ ಹೊರಟು ಬಿಡುತ್ತಾರೆ. ಜಂಬೂ ಸವಾರಿ ದಿನದ ಸಂಜೆ ನಗರದಲ್ಲಿ ಪೊಲೀಸ್ ಅಲಭ್ಯತೆಯ ಕೊರತೆ ಸಾರ್ವಜನಿಕರಿಗೆ ಸಂಜೆಯ ಸಮಯ ಓಡಾಡಲು ಬಹಳ ತೊಂದರೆ ಅನುಭವಿಸಬೇಕಾಗುತ್ತದೆ.
ಪ್ರತೀ ವರ್ಷ ಜಂಬೂ ಸವಾರಿ ಪ್ರಾರಂಭವಾದಾಗ, ಹೆಚ್ಚಿನ ಸಂಖ್ಯೆಯ ಪೊಲೀಸರು ಮೆರವಣಿಗೆಯೊಂದಿಗೇ ಸಾಗಿಬಿಡುವುದರಿಂದ ನಗರದ ಇತರ ಭಾಗಗಳಲ್ಲಿ ಸಂಚಾರ ನಿಯಂತ್ರಣ, ಸಾರ್ವಜನಿಕ ಸುರಕ್ಷತೆ ಹಾಗೂ ಪ್ರವಾಸಿಗರ ಓಡಾಟದಲ್ಲಿ ಅಡಚಣೆ ಉಂಟಾಗುತ್ತಿದೆ.
ಹೀಗಾಗಿ ಅಕ್ಟೋಬರ್ 3ರಿಂದ 5ರವರೆಗೆ, ಪ್ರವಾಸಿಗರ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ನಗರಾದ್ಯಂತ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ನಾಗರಿಕರು ಹಾಗೂ ಸ್ಥಳೀಯ ಉದ್ಯಮಿಗಳು ಒತ್ತಾಯಿಸಿದ್ದಾರೆ.
ಹೋಟೆಲ್ ಉದ್ಯಮಿ ಶ್ರೀ ಕೆ. ಮಹೇಶ ಕಾಮತ್ ಈ ಕುರಿತು ಮಾತನಾಡುತ್ತಾ, “ಇಷ್ಟು ದಿನ ಸುರಕ್ಷಿತವಾಗಿ ಕೆಲಸ ಮಾಡಿದ ಪೊಲೀಸ್ ಇಲಾಖೆ, ಕೊನೆ ಕ್ಷಣದಲ್ಲಿ ಟ್ರಾಫಿಕ್ ನಿಭಾಯಿಸದಿದ್ದರೆ ಜನರ ನಿರೀಕ್ಷೆಗೆ ತಾಕತ್ತು ನೀಡಲಾಗದು. ಅಧಿಕಾರಿಗಳು ಪರಿಸ್ಥಿತಿಯನ್ನು ಅರಿತು ಸರ್ಕಾರ ಮತ್ತು ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಿ,” ಎಂದು ಮನವಿ ಮಾಡಿದ್ದಾರೆ.