ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಿತಾವಧಿ ಶಿಕ್ಷೆ ನೀಡಿದ ಹಿನ್ನೆಲೆಯಲ್ಲಿ. ಇದೀಗ ತೀರ್ಪು ಪ್ರಶ್ನಿಸಿ ಹೈಕೋರ್ಟಿಗೆ ಪ್ರಜ್ವಲ್ ರೇವಣ್ಣ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿ ಅರ್ಜಿಯಲ್ಲಿ ರಾಜಕೀಯ ದುರುದೇಶದಿಂದ ಮಹಿಳೆಯನ್ನು ಅಸ್ತ್ರವಾಗಿಸಿ ಎಫ್ಐಆರ್ ದಾಖಲಿಸಿದ್ದಾರೆ. 2023ರಲ್ಲಿ ಫಾರ್ಮ್ ಹೌಸ್ ಗೃಹಪ್ರವೇಶದಲ್ಲಿ ಮಹಿಳೆ ಪಾಲ್ಗೊಂಡಿದ್ದಾರೆ.
ಅತ್ಯಾಚಾರವಾಗಿದ್ದರೆ ಮಹಿಳೆ ಗೃಹಪ್ರವೇಶಕ್ಕೆ ಹೇಗೆ ಬರುತ್ತಿದ್ದರು? ಈ ಮಹಿಳೆಯಿಂದ ಮೂರು ವರ್ಷದ ಬಳಿಕ ಪೊಲೀಸರು ದೂರು ಪಡೆದಿದ್ದಾರೆ ಮಹಿಳೆ ಗುರುತಿಸಿಲ್ಲ. ಬ್ಯಾಟರಿ ಮತ್ತು ಪೇಂಟ್ ಇದ್ದ ರೂಮಿನಲ್ಲಿ ಉಡುಪು ಸಿಕ್ಕಿದಂದು ಹೇಳಿದ್ದಾರೆ. ಲಾಕ್ ಆಗಿದ್ದರೂಮಿನಲ್ಲಿ ವೀರ್ಯಾಣುವಿದ್ದ ಬಟ್ಟೆ ಸಿಗಲು ಸಾಧ್ಯವೇ?
ಕೂದಲನ್ನು ಸುತ್ತಿ ಬ್ಯಾಗಿನಲ್ಲಿ ಇಟ್ಟ ರಹಸ್ಯ ತಿಳಿಯುತ್ತಿಲ್ಲ. ಮಹಿಳೆಯ ಸಿಆರ್ಪಿಸಿ 164 ಹೇಳಿಕೆಯನ್ನು ಕೋರ್ಟಿಗೆ ಹಾಜರುಪಡಿಸಿಲ್ಲ. ವಿಡಿಯೋ ಇತ್ತು ಎಂದು ಆರೋಪಿಸಲಾದ ಮೊಬೈಲ್ ಅನ್ನೇ ವಶಕ್ಕೆ ಪಡೆದಿಲ್ಲ. ಎಫ್ಎಸ್ಎಲ್ ವರದಿಯಲ್ಲೂ ವಿರೋಧಭಾಸಗಳಿವೆ ಎಂದು ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಶಿಕ್ಷೆ ರದ್ದುಪಡಿಸುವಂತೆ ಹೈಕೋರ್ಟಿಗೆ ಪ್ರಜ್ವಲ್ ಮನವಿ ಮಾಡಿದ್ದಾರೆ.