Tuesday, September 30, 2025
Google search engine

Homeರಾಜ್ಯಹುಬ್ಬಳ್ಳಿಯಲ್ಲಿ ಅಪರೂಪದ ಮಗು ಜನ: ಮಗುವಿನೊಳಗೇ ಮತ್ತೊಂದು ಮಗು!

ಹುಬ್ಬಳ್ಳಿಯಲ್ಲಿ ಅಪರೂಪದ ಮಗು ಜನ: ಮಗುವಿನೊಳಗೇ ಮತ್ತೊಂದು ಮಗು!

ಹುಬ್ಬಳ್ಳಿ : ರಾಜ್ಯದಲ್ಲೊಂದು ಅಪರೂಪದ ಪ್ರಕರಣವೊಂದು ಪತ್ತೆಯಾಗಿದ್ದು, ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವಿಚಿತ್ರ ಮಗುವೊಂದು 2 ದಿನಗಳ ಹಿಂದೆ ಜನಿಸಿದೆ.

ಕುಂದಗೋಳ ತಾಲೂಕಿನ ಗರ್ಭಿಣಿ ಎರಡನೇ ಹೆರಿಗೆಗೆಂದು ಕೆಎಂಸಿಆರ್ ಐನ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದರು. ಸೆ.23ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜನಿಸಿದ ಮಗುವಿನೊಳಗೊಂದು ಮಗು ಇದ್ದು, ಎಂಆರ್ ಐ ತಪಾಸಣೆ ವರದಿ ಸಂಗ್ರಹ ಪ್ರಕ್ರಿಯೆ ನಡೆದಿದೆ.

ಮಗು ಆರೋಗ್ಯವಾಗಿದೆ. ಆದರೆ, ಆ ಮಗುವಿನೊಳಗೊಂದು ಮಗು ಇರುವುದನ್ನು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಶಸ್ತ್ರಚಿಕಿತ್ಸಕರು ಪತ್ತೆ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular