Tuesday, September 30, 2025
Google search engine

Homeಸ್ಥಳೀಯಮೈಸೂರು ದಸರಾ ಮಹೋತ್ಸವ ಕೊನೆ ಹಂತಕ್ಕೆ: ಜಂಬೂಸವಾರಿ ಮೆರವಣಿಗೆಗೆ ಫೈನಲ್ ತಾಲೀಮು ಪೂರ್ಣ

ಮೈಸೂರು ದಸರಾ ಮಹೋತ್ಸವ ಕೊನೆ ಹಂತಕ್ಕೆ: ಜಂಬೂಸವಾರಿ ಮೆರವಣಿಗೆಗೆ ಫೈನಲ್ ತಾಲೀಮು ಪೂರ್ಣ

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಕೊನೆ ಹಂತಕ್ಕೆ ಬಂದಿದೆ. ವಿಜಯದಶಮಿ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಈ ಬಾರಿಯ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ 2 ದಿನ ಮಾತ್ರ ಬಾಕಿ ಹಿನ್ನೆಲೆ
ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆಯ ಅಂತಿಮ ಹಂತದ ತಾಲೀಮು ಸಂಪನ್ನವಾಗಿದೆ.ಅಭಿಮನ್ಯು ನೇತೃತ್ವದ ದಸರಾ ಗಜಪಡೆ, ಅಶ್ವಾರೋಹಿ ದಳ ಫೈನಲ್ ರಿಹರ್ಸಲ್ ನಲ್ಲಿ ಭಾಗಿಯಾಗಿವೆ.

ಅಂಬಾರಿ ಆನೆ ಅಭಿಮನ್ಯುವಿಗೆ ಎಡಬಲದಲ್ಲಿ ಸಾಗಿದ ಕುಮ್ಕಿ ಆನೆಗಳಾದ ಕಾವೇರಿ, ರೂಪ ಸಾಥ್ ನೀಡಿವೆ.ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ ಭಾಗಿಯಾಗಿದೆ. ಸಾಲಾನೆಗಳಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಸುಗ್ರಿವ, ಹೇಮಾವತಿ ಆನೆಗಳು ಜಂಬೂಸವಾರಿ ಮೆರವಣಿಗೆಯ ಅಂತಿಮ ರಿಹರ್ಸಲ್ ನಲ್ಲಿ ಭಾಗಿಯಾಗಿವೆ. ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯುವಿಗೆ ಮೈಸೂರು ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಡಿಸಿಎಫ್ ಡಾ. ಪ್ರಭುಗೌಡ, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್ ಸಾಂಕೇತಿಕವಾಗಿ ಪುಷ್ಪಾರ್ಚನೆ ನೆರವೇರಿಸಿದ್ದಾರೆ.ಪೊಲೀಸ್ ವಾದ್ಯವೃಂದ, ಪೊಲೀಸ್ ಇಲಾಖೆಯ ತುಕಡಿ ರಿಹರ್ಸಲ್ ನಲ್ಲಿ ಭಾಗಿಯಾಗಿದ್ದವು.

RELATED ARTICLES
- Advertisment -
Google search engine

Most Popular