ಚಾಮರಾಜನಗರ : ಶಂಕರ್ ನಾಗ್ ಜನ್ಮ ದಿನ ನವೆಂಬರ್ 9 ಆಟೋ ದಿನವಾಗಿ ಘೋಷಿಸಿ ಆಟೋ ಚಾಲಕರು ಹಾಗೂ ಮಾಲೀಕರಿಗೆ ಗೌರವ ಸಮರ್ಪಿಸುವ ಮೂಲಕ ಶಂಕರ್ ನಾಗ್ ರವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕಾರ್ಯವನ್ನು ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಆವರಣದಲ್ಲಿ ಇಂದು ಶಂಕರ ನಾಗ್ ನೆನಪು ಹಾಗೂ ಕೊಡುಗೆಗಳು ಕುರಿತ ಕಾರ್ಯಕ್ರಮ ದಲ್ಲಿ ಪುಷ್ಪ ಅರ್ಪಿಸಿ ಶಂಕರ್ ನಾಗ್ ಕನ್ನಡ ನಾಡು ಕಂಡ ಅಭೂತಪೂರ್ವ ಶ್ರೇಷ್ಠ ನಟ, ನಿರ್ದೇಶಕ ,ಕನ್ನಡ ಪ್ರೇಮಿ. ಮೆಟ್ರೋ ಬೆಂಗಳೂರಿನಲ್ಲಿ ಸ್ಥಾಪನೆಗೆ ಯೋಜನೆ ರೂಪಿಸಬೇಕು ಎಂಬ ದೂರದೃಷ್ಟಿಯ ಕಲ್ಪನೆ ಮಹತ್ತರವಾದದ್ದು. ಕನ್ನಡ ಚಲನಚಿತ್ರ ರಂಗಕ್ಕೆ ಅವರ ಜೀವಂತಕ್ಕೆ ಪಾತ್ರ ಪೊಲೀಸ್ ಅಧಿಕಾರಿ ,ಅಮೋಘವಾದ ಕತೆ ಹಾಗು ನಿರ್ದೇಶನ ಮರೆಯಲಾಗದ್ದು. ಶಂಕರ್ ನಾಗ್ ಜನ್ಮದಿನವನ್ನು ಆಟೋ ದಿನವನ್ನಾಗಿ ಆಚರಿಸಿ ಕರ್ನಾಟಕದ ಸಮಗ್ರ ಆಟೋ ಚಾಲಕರು ಮತ್ತು ಮಾಲೀಕರಿಗೆ ಗೌರವವನ್ನು ಸಲ್ಲಿಸುವ ಮೂಲಕ ಶಂಕರ್ ನಾಗ್ ರವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುವಂತೆ ಆಗಲಿ ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರೊ.ಜಯಣ್ಣ ರವರು ಮಾತನಾಡಿ ಕನ್ನಡ ಚಲನಚಿತ್ರರಂಗದ ಶ್ರೇಷ್ಠ ನಟರಾಗಿ ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆ, ಸ್ಟುಡಿಯೋ, ತಂತ್ರಜ್ಞಾನ ಮುಂತಾದ ಸಮಗ್ರವಾದ ಪರಿಕಲ್ಪನೆಯ ಮೂಲಕ ಕನ್ನಡ ಚಿತ್ರವನ್ನು ಬೆಳಗಿಸಿದ ಶಂಕರನಾಗ್ ಅಮರರು ಎಂದರು.
ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ನಾಗ್ ಹರದನಹಳ್ಳಿ ಮಾತನಾಡಿ ಶಂಕರ್ ನಾಗ್ ರವರ ಜೀವನ, ಇತಿಹಾಸ ,ಸಿನಿಮಾ, ಕ್ಷೇತ್ರ ಸಾಮಾಜಿಕ ಸೇವೆ ಸಲ್ಲಿಸಿದವರು . ಯುವಕರಿಗೆ ಸದಾ ಆದರ್ಶ ಎಂದರು.
ಬರಹಗಾರ ಎಸ್ ಲಕ್ಷ್ಮೀನರಸಿಂಹ ಮಾತನಾಡಿದರು. ಅಪ್ಪು ಮೆಲೋಡಿಸ್ ರವರಿಂದ ಶಂಕರನಾಗ್ ಚಲನ ಚಿತ್ರ ಗೀತೆಗಳಿಗೆ ಹಾಡಿ ಹೇಳಿ ಗೌರವ ಸಲ್ಲಿಸಿದರು.
ಗಾಯಕರಾದ ರಂಗಸ್ವಾಮಿ ಕಾಗಲವಾಡಿ, ಮೂರ್ತಿ, ನಾಗರಾಜು, ಗುಂಡ್ಲುಪೇಟೆ ಮಯೂರ್, ಮೈಸೂರು ಮಹೇಶ್, ಕಾವೇರಿ ಶಿವಕುಮಾರ್, ಸಿ ಡಿ ಪ್ರಕಾಶ್, ಮಹಮದ್ ಗೌಸ್, ಪದ್ಮಾಕ್ಷಿ ಗಾಯನ ಬಹಳ ಮೆಚ್ಚುಗೆ ಗಳಿಸಿತು.
ಕಾರ್ಯಕ್ರಮದಲ್ಲಿ ಪದ್ಮ ಪುರುಷೋತ್ತಮ್ , ಸರಸ್ವತಿ, ಶಿವಲಿಂಗಮೂರ್ತಿ, ಕನ್ನಡ ರಾಜಗೋಪಾಲ್, ಬಿಕೆ ಆರಾಧ್ಯ, ಗೋವಿಂದರಾಜು ಹೊಂಗನೂರು ಸಿದ್ದಲಿಂಗಸ್ವಾಮಿ, ಇದ್ದರು.