Wednesday, October 1, 2025
Google search engine

Homeರಾಜ್ಯದಸರಾ ಹಬ್ಬಕ್ಕೆ ಬೆಲೆ ಏರಿಕೆ: ಹೂವು-ಹಣ್ಣು, ಪೂಜಾ ಸಾಮಗ್ರಿಗಳ ದರ ಏರಿಕೆ!

ದಸರಾ ಹಬ್ಬಕ್ಕೆ ಬೆಲೆ ಏರಿಕೆ: ಹೂವು-ಹಣ್ಣು, ಪೂಜಾ ಸಾಮಗ್ರಿಗಳ ದರ ಏರಿಕೆ!

ಬೆಂಗಳೂರು: ದಸರಾ ಹಬ್ಬಕ್ಕೆ ಒಂದು ಕಡೆ ಚಿನ್ನದ ಬೆಲೆ ಹೆಚ್ಚಳವಾಗುತ್ತಿದ್ದರೆ, ಮತ್ತೊಂದು ಕಡೆ ಹೂವು, ಹಣ್ಣುಗಳ ಬೆಲೆ ಕೂಡ ಹೆಚ್ಚಳವಾಗುತ್ತಿದೆ.

ಮೊದಲೇ ಬೆಲೆ ಏರಿಕೆ ಬಿಸಿಯಿಂದ ಬೇಯುತ್ತಿರುವ ಜನತೆಗೆ ಈಗ ಹಬ್ಬದ ಸಮಯದಲ್ಲಿ ಹೂವು, ಹಣ್ಣುಗಳ ಬೆಲೆ ಹೆಚ್ಚಳವಾಗುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿರುವುದರಲ್ಲಿ ಅನುಮಾನವಿಲ್ಲ. ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನರು ಮಾರುಕಟ್ಟೆಗೆ ತೆರಳಿದರೆ ಬೆಲೆ ಏರಿಕೆಯ ಕಂಡು ಬೆರಾಗುತ್ತಿದ್ದಾರೆ. ಅನೇಕ ಮಂದಿ ಚೌಕಾಸಿ ಕೂಡ ಮಾಡುತ್ತಿದ್ದು, ವ್ಯಾಪಾರಿಗಳ ಮನ ಗೆಲ್ಲುವಲ್ಲಿ ಕೆಲವು ಮಂದಿ ಯಶಸ್ವಿಯಾದರೆ, ಮತ್ತೆ ಕೆಲವು ಮಂದಿ ಬಂದ ದಾರಿಗೆ ಸುಖವಿಲ್ಲ ಅನ್ನೋ ರೀತಿ ಕಾಸಿಗೆ ತಕ್ಕಂತೆ ಖರೀದಿ ಮಾಡುತ್ತಿದ್ದಾರೆ.

ಇಂದಿನ ದರ ಹೀಗಿದೆ: ಸೇವಂತಿ 300-400 ರೂ. ಕನಕಾಂಬರ 2000-2500 ರೂ.ಮಲ್ಲಿಗೆ ಹೂವು ಕೆಜಿಗೆ 1500 ರಿಂದ 2000 ರೂಪಾಯಿಗೆ ಏರಿಕೆಯಾಗಿದೆ. ಕನಕಾಂಬರ ಹೂವು ಕೆಜಿಗೆ 2000 ರೂ.ನಿಂದ 2500 ರೂ.ಗೆ ಏರಿಕೆ, ಗುಲಾಬಿ ಹೂವು ಕೆಜಿಗೆ 400 ರಿಂದ 500 ರೂ.ಗೆ ಏರಿಕೆ, ಕಾಕಡ ಹೂವು ಕೆಜಿಗೆ 600 ರಿಂದ 800 ರೂ.ಗೆ ಏರಿಕೆ, ಬಾಳೆಕಂದು ದೊಡ್ಡದು ಜೋಡಿಗೆ 100 ರಿಂದ 150 ರೂ.ಗೆ ಏರಿಕೆ. ಬೂದು ಕುಂಬಳ ಕಾಯಿ ಕೆಜಿಗೆ 40 ರಿಂದ 60 ರೂ.ಗೆ ಏರಿಕೆಯಾಗಿದೆ.

RELATED ARTICLES
- Advertisment -
Google search engine

Most Popular