ದೇಶದಾದ್ಯಂತ ವಿಜಯದಶಮಿ ಹಬ್ಬದ ಸಡಗರ ಮನೆ ಮಾಡಿದ್ದು, ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ದೇಶದ ಜನತೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ವಿಜಯದಶಮಿ ಕೆಟ್ಟದ್ದು, ಮತ್ತು ಅಸತ್ಯದ ಮೇಲೆ ಒಳ್ಳೆಯ ಮತ್ತು ಸತ್ಯದ ವಿಜಯದ ಸಂಕೇತವಾಗಿದೆ. ಈ ಪವಿತ್ರ ಸಂದರ್ಭದಲ್ಲಿ ಪ್ರತಿಯೊಬ್ಬರೂ ಧೈರ್ಯ, ಬುದ್ದಿವಂತಿಕೆ, ಮತ್ತು ಭಕ್ತಿಯ ಹಾದಿಯಲ್ಲಿ ನಿರಂತರವಾಗಿ ಮುನ್ನಡೆಯಲು ಸ್ಪೂರ್ತಿ ಪಡೆಯಲಿ ಎಂಬುವುದು ನನ್ನ ಆಶಯ ಎಂದು ಶುಭಕೋರಿದ್ದಾರೆ.