ಮೈಸೂರು : ನವರಾತ್ರಿ ಆಚರಣೆಯ ನಂತರ ನಡೆಯುವ ಅದ್ದೂರಿ ಜಂಬೂ ಸವಾರಿಗೆಕೆಲವೇ ಗಂಟೆಗಳು ಬಾಕಿಯಿದ್ದು,ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ ಮೈಸೂರಿನಲ್ಲಿ ಇಂದು ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಇದರಿಂದ ಭಕ್ತರಲ್ಲಿ ಆತಂಕ ಮೂಡಿದೆ.
ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಕೊಂಚ ಮಳೆಯ ಹೊರತಾಗಿಯೂ, ಈ ಹವಾಮಾನ ಹಬ್ಬದ ಜಂಬೂ ಸವಾರಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಇದೀಗ ಹವಾಮಾನ ಇಲಾಖೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಭಾಗಗಳಲ್ಲೂ ಗಾಳಿಯೊಂದಿಗೆ ಜೋರಾಗಿ ಮಳೆಯಾಗುವ ಸಾಧ್ಯತೆ ಎಂದು ತಿಳಿಸಿದೆ.
ಹವಾಮಾನ ಇಲಾಖೆ ವರದಿಯ ಪ್ರಕಾರ, ಮೈಸೂರನ್ನು ಹೊರತು ಪಡಿಸಿ, ಕೊಡಗು, ಕಲ್ಬುರ್ಗಿ, ಬೀದರ್, ಬೆಳಗಾವಿ, ಶಿವಮೊಗ್ಗ, ಹಾಸನ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ, ಹೀಗಾಗಿ ಆ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.
ಇದೀಗ ದಸರಾಕ್ಕೆ ಇನ್ನೇನು ಕೆಲವೇ ಗಂಟೆಗಳಿರುವಾಗ ಮೋಡ ಕವಿದ ವಾತಾವರಣ ಉಂಟಾಗಿದ್ದು, ಜಂಬೂ ಸವಾರಿಯ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.. ಇದರಿಂದ ಭಕ್ತರಿಗೆ ಕೊಂಚ ಆತಂಕ ಉಂಟಾಗಿದೆ.