ಮಂಗಳೂರು (ದಕ್ಷಿಣ ಕನ್ನಡ) ಮಂಗಳೂರಿನ ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆ.22ರಂದು ಆರಂಭಗೊಂಡ ನವರಾತ್ರಿಯ ಹಬ್ಬದ ಮಂಗಳೂರು ದಸರಾ ಶೋಭಾಯಾತ್ರೆಗೆ ಮಾಜಿ ವಿತ್ತ ಸಚಿವ ಕುದ್ರೋಳಿ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿಯವರ ನೇತೃತ್ವದದಲ್ಲಿ ಸಂಜೆ ಚಾಲನೆ ನೀಡಿದರು.
ಗಣಪತಿ ನವದುರ್ಗೆಯರು, ಮತ್ತು ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ಆರಂಭಗೊಂಡಿದೆ. ಶೋಭಾಯಾತ್ರೆಯು ಕ್ಷೇತ್ರದಿಂದ ಹೊರಟು ನಗರ ಪ್ರದಕ್ಷಿಣೆ ಯ ಬಳಿಕ ಚಿತ್ರಾ ಟಾಕೀಸ್ ಅಳಕೆಯಾಗಿ ಮತ್ತೆ ಶ್ರೀಕ್ಷೇತ್ರಕ್ಕೆ ಬಂದು ವಿಸರ್ಜನೆಗೊಳ್ಳಲಿದೆ.ಕುದ್ರೋಳಿಯಲ್ಲಿ ಗುರುವಾರ ನವದು ರ್ಗೆಯರಿಗೆ ಮಂಗಳಾರತಿಯೊಂದಿಗೆ ಹೊರಟ ಮಂಗಳೂರು ದಸರಾ ಮೆರವಣಿಗೆ ವಿವಿಧ ಸಂಘಟನೆಗಳ ಟ್ಯಾಬ್ಲೊಗಳೊಂದಿಗೆ ಶುಕ್ರವಾರ ಮುಂಜಾನೆಯವರೆಗೆ ನಗರ ಪ್ರದಕ್ಷಿಣೆ ಮಾಡಿ ಕುದ್ರೋಳಿಗೆ ಮರಳಲಿದೆ.
ಈ ಸಂದರ್ಭದಲ್ಲಿ ಶಾಸಕ ಐವನ್ ಡಿ ಸೋಜ, ಶ್ರೀ ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿಯ ಅದ್ಯಕ್ಷರಾದ ಜೈರಾಜ್ ಸೋಮರಾಜ್, ಉಪಾದ್ಯಕ್ಷರಾದ ಉರ್ಮಿಳಾ ರಮೇಶ್,ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯ ರಾದ ಜಗದೀಪ್ ಸುವರ್ಣ, ಕೃತಿನ್ ಅಮಿನ್,ರಾದಕೃಷ್ಣ, ಹರಿಕೃಷ್ಣ ಬಂಟ್ವಾಳ ಮುಂತಾದವರು ಹಾಜರಿದ್ದರು.