Saturday, October 4, 2025
Google search engine

Homeರಾಜ್ಯಸುದ್ದಿಜಾಲಎಚ್‌.ಡಿ. ಕೋಟೆ ಆದಿಚುಂಚನಗಿರಿ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನ ಕುರಿತ ವಿಶೇಷ ಉಪನ್ಯಾಸ

ಎಚ್‌.ಡಿ. ಕೋಟೆ ಆದಿಚುಂಚನಗಿರಿ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನ ಕುರಿತ ವಿಶೇಷ ಉಪನ್ಯಾಸ

ಎಚ್.ಡಿ. ಕೋಟೆ: ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಹೆಚ್ ಡಿ ಕೋಟೆ.‌ ವಾಣಿಜ್ಯ ವಿಭಾಗದಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, “ವ್ಯಕ್ತಿತ್ವ ವಿಕಸನ ಮತ್ತು ವೃತ್ತಿಮಾರ್ಗದರ್ಶನ” ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಡಾ. ಪರಶಿವಮೂರ್ತಿರವರು, ಸಹಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಲ್ಲಹಳ್ಳಿ. ಇವರು ವಿದ್ಯಾರ್ಥಿಗಳನ್ನು ಕುರಿತಂತೆ ಭವಿಷ್ಯದಲ್ಲಿ ವಿದ್ಯಾರ್ಥಿಗಳು ತಮ್ಮ ಉಜ್ವಲ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಸಂವಹನ, ನಾಯಕತ್ವ ಮತ್ತು ಪ್ರೇರೆಪಣೆಯ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಬಗ್ಗೆ ಕುರಿತು ಹಲವಾರು ಉದಾಹರಣೆಗಳ ಸಹಿತ ತಿಳಿಸಿಕೊಟ್ಟರು ಹಾಗೂ ವಿದ್ಯಾರ್ಥಿಗಳ ಕರ್ತವ್ಯಗಳು ಮತ್ತು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಹಾಗೂ ಬ್ಯಾಂಕಿಂಗ್ ವಲಯದಲ್ಲಿ ಬರುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕುರಿತಂತೆ ವಿಶೇಷ ಮಾರ್ಗದರ್ಶನವನ್ನು ನೀಡಿದರು ಮತ್ತು ವಿದ್ಯಾರ್ಥಿಗಳಿಗೆ ಉಪನ್ಯಾಸದ ಜೊತೆಗೆ ಜೀವನದ ಮೌಲ್ಯಗಳ ಬಗ್ಗೆ ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದರ ಮೂಲಕ ಅವರ ಜೀವನದಲ್ಲಾದಂತಹ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರೇಪಣೆಯನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳು ತಮ್ಮ ದೌರ್ಬಲ್ಯವನ್ನು ಹೇಗೆ ಸದ್ಗುಣಗಳನ್ನಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನವನ್ನು ಹೇಗೆ ರೂಪಿಸಕೊಳ್ಳಬೇಕೆಂದು ತಮ್ಮ ಅನುಭವದ ಮಾತುಗಳಿಂದ ವಿದ್ಯಾರ್ಥಿಗಳಿಗೆ ತಿಳಿಸಿದರು.

ಹಾಗೂ ಈ ದಿನ ಎಚ್ .ಡಿ. ಕೋಟೆ ಆದಿಚುಂಚನಗಿರಿ ಕಾಲೇಜಿಗೆ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಯಾಕೆಂದರೆ ನಾನು ಎಷ್ಟೋ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದೇನೆ ಆದರೆ ಕಾರ್ಯಕ್ರಮ ಪ್ರಾರಂಭವಾದಾಗ ಅನನ್ಯ ಎಸ್. ಗೌಡ ಎಂಬ ವಿಧ್ಯಾರ್ಥಿನಿ ಯ ಸ್ವಾಗತ ಭಾಷಣ ಕೇಳಿದ ತಕ್ಷಣ ಈ ಕಾಲೇಜಿನಲ್ಲಿ ಶಿಕ್ಷಣ ಹೇಗೆ ಕೊಡುತ್ತಾರೆ ಎಂಬುದು ನನಗೆ ಅರ್ಥವಾಯಿತು. ಅನನ್ಯ. ಎಸ್ ಗೌಡ ಎಂಬ ವಿದ್ಯಾರ್ಥಿನಿಯ ಆಂಕರಿಂಗ್ ಅಂದರೆ ಸ್ವಾಗತ ಭಾಷಣ ಇದ್ಯಲ್ಲ ಎಲ್ಲರಿಗೂ ಆ ಚಾತುರತೆ ಬರುವುದಿಲ್ಲ. ಆ ಮಗುವಿನ ಮಾತುಗಳನ್ನು ಕೇಳಿದ ತಕ್ಷಣ ನನ್ನ ಮನಸ್ಸಿಗೆ ತುಂಬಾ ಖುಷಿ ತಂದಿದೆ.

ಈ ವಿದ್ಯಾರ್ಥಿನಿ ಹಾಗೆ ಎಲ್ಲಾ ವಿದ್ಯಾರ್ಥಿಗಳು ಸಹ ಇದ್ದಾರೆ ಎಂಬುದು ನನಗೆ ನಂಬಿಕೆ ಬಂದಿದೆ ಆದುದರಿಂದ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದು ನನ್ನ ಪುಣ್ಯ ಇಂದು ತಿಳಿಸಿದರು. ಇಂತಹ ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡಿದರೆ ಅಂತಹ ಕಾಲೇಜಿಗೆ ಕೀರ್ತಿ ಹಾಗೂ ಉನ್ನತ ಹೆಸರು ಬರುವುದರಲ್ಲಿ ಯಾವುದೇ ರೀತಿ ಸಂಶಯ ಇರುವುದಿಲ್ಲ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರವೀಣ್ ಗೌಡರ್‌ ರವರು, ಮುಖ್ಯ ವ್ಯವಸ್ಥಾಪಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿ ಕೋಟೆ ಇವರು ವಿದ್ಯಾರ್ಥಿಗಳಿಗೆ ಬ್ಯಾಂಕ್ ವ್ಯವಸ್ಥೆಯಲ್ಲಿ ಬರುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಸೈಬರ್‌ ಕ್ರೈಂ ನಲ್ಲಿ ಆಗುವಂತಹ ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು ಹಾಗೂ ಬ್ಯಾಂಕಿಂಗ್ ವಿಧಗಳು ಮತ್ತು ಬ್ಯಾಂಕ್ ವ್ಯವಸ್ಥೆಯಲ್ಲಿ ಬರುವಂತಹ ಮುಂತಾದ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿದರು ಹಾಗೂ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ನಾಗೇಂದ್ರ ಕುಮಾರ್ ರವರು ವಿದ್ಯಾರ್ಥಿಗಳನ್ನು ಕುರಿತು ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಮನವರಿಕೆ ಮಾಡಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೆ ಎನ್ ವೆಂಕಟೇಶ್‌ ರವರು, ದೈಹಿಕ ನಿರ್ದೇಶಕರಾದ ಕಲ್ಲೇಶ್ ಗೌಡರವರು, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸಿದ್ದೇಗೌಡ ಹೆಚ್‌ ಎಸ್‌, ರಾಮಚಂದ್ರ, ಮಹೇಂದ್ರ, ಸಿದ್ದರಾಜುರವರು, ರವಿ ಎಸ್‌ ರವರು, ಚಿಕ್ಕದೇವಿ, ಸಂಗೀತ ಗೌಡ ಎನ್‌, ದಿಲೀಪ .ಆರ್ . ಕಾರ್ಯಕ್ರಮದಲ್ಲಿ ತನ್ನದೇ ಆದ ಮಾತಿನಲ್ಲಿ ಚಾತುರ್ಯ ಹಾಗೂ ಎಲ್ಲರಲ್ಲೂ ಪ್ರಶಂಸೆ ಗಳಿಸಿದ ವಿದ್ಯಾರ್ಥಿನಿ ಅನನ್ಯ ಎಸ್. ಗೌಡ ಹಾಗೂ ಎಲ್ಲಾ ಸಿಬ್ಬಂದಿ ವರ್ಗ & ವಿದ್ಯಾರ್ಥಿವೃಂದ ಹಾಜರಿದ್ದರು.

RELATED ARTICLES
- Advertisment -
Google search engine

Most Popular