Saturday, October 4, 2025
Google search engine

Homeರಾಜ್ಯಬೆಂಗಳೂರು ನಗರದಲ್ಲಿ ಜಾತಿ ಸಮೀಕ್ಷೆ ಪ್ರಾರಂಭ: ಇಂದಿನಿಂದ ಮನೆ ಮನೆಗೆ ಭೇಟಿ

ಬೆಂಗಳೂರು ನಗರದಲ್ಲಿ ಜಾತಿ ಸಮೀಕ್ಷೆ ಪ್ರಾರಂಭ: ಇಂದಿನಿಂದ ಮನೆ ಮನೆಗೆ ಭೇಟಿ

ಬೆಂಗಳೂರು: ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ (ಜಾತಿ ಗಣತಿ) ಆರಂಭವಾಗಿದೆ. ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಆರಂಭವಾಗಲಿದ್ದು, ನಗರದ ಎಲ್ಲಾ ನಾಗರಿಕರು ಅಗತ್ಯ ದಾಖಲೆಗಳನ್ನು (ಅಧಾರ್ ಕಾರ್ಡ್/ರೇಷನ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳು) ಸಿದ್ಧವಾಗಿಟ್ಟುಕೊಂಡು ಸಮೀಕ್ಷಾದಾರರು ಆಗಮಿಸುತ್ತಿದ್ದಂತೆ ಮಾಹಿತಿ ನೀಡಬೇಕು ಎಂದು ಕೋರಲಾಗಿದೆ.

ಪಶ್ಚಿಮ ನಗರ ಪಾಲಿಕೆಯ 64 ವಾರ್ಡ್ ವ್ಯಾಪ್ತಿಯಲ್ಲಿ 14,65,684 ಮನೆಗಳು;  ದಕ್ಷಿಣ ನಗರ ಪಾಲಿಕೆಯ 34 ವಾರ್ಡ್ ವ್ಯಾಪ್ತಿಯಲ್ಲಿ 10,94,793 ಮನೆಗಳು; ಉತ್ತರ ನಗರ ಪಾಲಿಕೆಯ 41 ವಾರ್ಡ್ ವ್ಯಾಪ್ತಿಯ 10,22,926 ಮನೆಗಳು; ಪೂರ್ವ ನಗರ ಪಾಲಿಕೆಯ 17 ವಾರ್ಡ್ ವ್ಯಾಪ್ತಿಯ 9,12,713 ಮನೆಗಳು ಮತ್ತು ಕೇಂದ್ರ ನಗರ ಪಾಲಿಕೆಯ 42 ವಾರ್ಡ್ ವ್ಯಾಪ್ತಿಯ 5,61,353 ಮನೆಗಳಲ್ಲಿ ಸಮೀಕ್ಷೆ ನಡೆಯಲಿದೆ.

ಈ ಕಾರ್ಯಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಕೆಎಎಸ್ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿ ಎಂದು ನೇಮಕ ಮಾಡಲಾಗಿದೆ. ಒಟ್ಟು 34 ಕೆಎಎಸ್ ಅಧಿಕಾರಿಗಳು ಸಮೀಕ್ಷಾ ಕಾರ್ಯದ ಜವಬ್ದಾರಿ ವಹಿಸಿಕೊಂಡಿದ್ದಾರೆ.  ಪ್ರತಿ ವಾರ್ಡ್‌ಗೆ ಒಬ್ಬರಂತೆ ಗ್ರೂಪ್-ಎ ವೃಂದದ ಅಧಿಕಾರಿಗಳನ್ನು ವಾರ್ಡ್ ಮೇಲ್ವಿಚಾರಕರಾಗಿ/ಚಾರ್ಜ್ ಅಧಿಕಾರಿಗಳೆಂದು ನೇಮಿಸಲಾಗಿದ್ದು, ಅವರು ಆ ವಾರ್ಡ್‌ ಸಮೀಕ್ಷೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ನಿರ್ವಹಿಸಲಿದ್ದಾರೆ.

ಆಯುಕ್ತರು, ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರು ಸಮೀಕ್ಷಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular