Sunday, October 5, 2025
Google search engine

Homeರಾಜ್ಯಸುದ್ದಿಜಾಲಕೆಯುಡಬ್ಲೂಜೆ ಗ್ರಂಥಾಲಯ ಅ.6ಕ್ಕೆ ಉದ್ಘಾಟನೆ

ಕೆಯುಡಬ್ಲೂಜೆ ಗ್ರಂಥಾಲಯ ಅ.6ಕ್ಕೆ ಉದ್ಘಾಟನೆ

ವರದಿ: ಸ್ಟೀಫನ್ ಜೇಮ್ಸ್

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು(ಕೆಯುಡಬ್ಲ್ಯೂಜೆ) ತನ್ನ ಕೇಂದ್ರ ಕಾರ್ಯಾಲಯದಲ್ಲಿ ಗ್ರಂಥಾಲಯವನ್ನು ಪ್ರಾರಂಭಿಸಲು ಮುಂದಾಗಿದೆ.

ಮಂಕುತಿಮ್ಮನ ಕಗ್ಗದ ಖ್ಯಾತಿಯ ಡಿವಿಜಿ ಅವರು 1932ರಲ್ಲಿ ಹುಟ್ಟು ಹಾಕಿದ ಪತ್ರಕರ್ತರ ಸಂಘಕ್ಕೆ 94 ವಸಂತಗಳು ತುಂಬುತ್ತಿರುವ ಹೊತ್ತಿನಲ್ಲಿ ಕೆಯುಡಬ್ಲೂಜೆ ಸಭಾಂಗಣದ ಹೊರಾಂಗಣದಲ್ಲಿ ಗ್ರಂಥಾಲಯ ಪ್ರಾರಂಭಿಸಲು ಸಿದ್ಧತೆ ನಡೆದಿದೆ. ಹಿರಿಯ ಪತ್ರಕರ್ತರು ಬರೆದಿರುವ ಪುಸ್ತಕಗಳಿಂದ ಹಿಡಿದು ಇತ್ತೀಚಿನ ತಲೆಮಾರಿನ ತನಕ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಡಲು ಉದ್ದೇಶಿಸಲಾಗಿದೆ.

ಅ.6ರಂದು ಬೆಳಿಗ್ಗೆ 10.45ಕ್ಕೆ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಸರಳ ಕಾರ್ಯಕ್ರಮ ನಡೆಯಲಿದ್ದು, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES
- Advertisment -
Google search engine

Most Popular