Sunday, October 5, 2025
Google search engine

Homeರಾಜ್ಯಸುದ್ದಿಜಾಲಬೆಳಗಾವಿ: ಚಿಂಚಲಿ ಮಾಯಕ್ಕಾದೇವಿ ಸ್ತಬ್ಧ ಚಿತ್ರಕ್ಕೆ 3ನೇ ಸ್ಥಾನ

ಬೆಳಗಾವಿ: ಚಿಂಚಲಿ ಮಾಯಕ್ಕಾದೇವಿ ಸ್ತಬ್ಧ ಚಿತ್ರಕ್ಕೆ 3ನೇ ಸ್ಥಾನ

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ : ಮೈಸೂರು ದಸರಾ ಮೆರವಣಿಗೆಯಲ್ಲಿ ಗಮನಸೆಳೆದ ದೇವಿ ರಾಜ್ಯದ ಸಾಂಸ್ಕೃತಿಕ ಉತ್ಸವವಾದ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ ಜಿಲ್ಲೆಯ ಚಿಂಚಲಿ ಗ್ರಾಮದ ಮಾಯಕ್ಕಾದೇವಿ ಸ್ತಬ್ಧಚಿತ್ರ ಮೂರನೇ ಸ್ಥಾನ ಪಡೆದಿದೆ.

ಧಾರ್ಮಿಕ ಸಂಪ್ರದಾಯ, ನಂಬಿಕೆ ಮತ್ತು ಕಲಾತ್ಮಕ ನಿಪುಣತೆಯಿಂದ ಕೂಡಿರುವ ಸ್ತಬ್ದ ಚಿತ್ರ ವಿಶೇಷ ಆಕರ್ಷಣೆಯಾಗಿತ್ತು. ಮಾಯಕ್ಕಾದೇವಿಯ ಪೌರಾಣಿಕ ಮಹಿಮೆ, ಸ್ಥಳೀಯ ಜನಜೀವನದ ಚಿತ್ರಣ ಮತ್ತು ಭಕ್ತಿಯ ಆವರಣದಲ್ಲಿ ವಿನ್ಯಾಸಗೊಂಡಿದ್ದ ಈ ಸ್ತಬ್ದಚಿತ್ರವು ಮೈಸೂರು ದಸರಾ ಮೆರವಣಿಗೆಯ ಸಮಯದಲ್ಲಿ ಸಾವಿರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಬಣ್ಣದ ವಿನ್ಯಾಸ, ಶಿಲ್ಪ ಕೌಶಲ್ಯ ಹಾಗೂ ಸಂಗೀತ ಸಮ್ಮೇಳನದೊಂದಿಗೆ ಈ ಚಿತ್ರಣವು ಕಣ್ಣಿಗೆ ಹಬ್ಬವಾಗಿತ್ತು.

ಈ ಬಾರಿ ಮೈಸೂರು ದಸರಾ ಜಂಬೂ ಸವಾರಿಯಲ್ಲಿ 31 ಜಿಲ್ಲೆಗಳಿಂದ ರಾಜ್ಯ ಸರ್ಕಾರದ 8, ವಿವಿಧ ನಿಗಮ ಮಂಡಳಿಯ 13, ಇತರೆ 6 ಸ್ತಬ್ಧ ಚಿತ್ರಗಳು ಸೇರಿ ಒಟ್ಟು ಬರೋಬ್ಬರಿ 58 ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಮಾಯಕ್ಕಾದೇವಿ ದೇವಸ್ಥಾನ ಚಿಂಚಲಿಯ ವಿಶೇಷತೆ ಸಾರುವ ಸ್ತಬ್ದಚಿತ್ರವೂ ಒಂದಾಗಿತ್ತು.ಮಾಯಕ್ಕ ದೇವಸ್ಥಾನದ ಇತಿಹಾಸ, ದೇವಿಯ ಮಹತ್ವ ಹಾಗೂ ದೇವತೆ ನಿದ್ರಿಸುತ್ತಿರುವ ತೇವಭೂಮಿಯ ಚಿತ್ರಣವನ್ನು ಸ್ಥಬ್ದಚಿತ್ರದಲ್ಲಿ ತೋರಿಸಲಾಗಿದೆ. ಬಿ.ಎಸ್.ಗಸ್ತಿ ಕಲಾವಿದರ ತಂಡದಿಂದ ಸ್ತಬ್ಧ ಚಿತ್ರವನ್ನು ನಿರ್ಮಿಸಿದೆ ಎಂದು ಸ್ತಬ್ದಚಿತ್ರ ನೂಡಲ್ ಅಧಿಕಾರಿ ರವಿ.ಎನ್.ಬಂಗಾರಪ್ಪನವರ ತಿಳಿಸಿದ್ದಾರೆ.

ಐತಿಹಾಸಿಕ ಧಾರ್ಮಿಕ ಹಿನ್ನೆಲೆ ಹೊಂದಿರುವ ಚಿಂಚಲಿ ಗ್ರಾದಮ ಮಾಯಕ್ಕಾದೇವಿ ದೇವಸ್ಥಾನ ಇತಿಹಾಸ ಸಾರುವ ಮಾಯಕ್ಕಾದೇವಿ ಸ್ತಬ್ದ ಚಿತ್ರವು ಮೈಸೂರು ದಸರಾ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿತ್ತು. ಒಟ್ಟು 58 ಸ್ತಬ್ದಚಿತ್ರಗಳಲ್ಲಿ ಬೆಳಗಾವಿ ಸ್ತಬ್ಧ ಚಿತ್ರಕ್ಕೆ ಮೂರನೇ ಸ್ಥಾನ ದೊರಕಿರುವುದು ಹೆಮ್ಮೆಯ ವಿಷಯವಾಗಿದೆ.


-ರಾಹುಲ ಶಿಂಧೆ, ಜಿಪಂ ಸಿಇಒ

RELATED ARTICLES
- Advertisment -
Google search engine

Most Popular