Sunday, October 5, 2025
Google search engine

Homeಸ್ಥಳೀಯದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿದ್ದ ಸ್ತಬ್ಧ ಚಿತ್ರಗಳ ಫಲಿತಾಂಶ ಪ್ರಕಟ

ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿದ್ದ ಸ್ತಬ್ಧ ಚಿತ್ರಗಳ ಫಲಿತಾಂಶ ಪ್ರಕಟ


ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ಧ ಚಿತ್ರಗಳ ವಿಭಾಗವಾರು ಹಾಗೂ ಕೇಂದ್ರ, ರಾಜ್ಯ ನಿಗಮವಾರು ಫಲಿತಾಂಶವನ್ನು ಘೋಷಿಸಲಾಗಿದೆ.

ಬೆಂಗಳೂರು ವಿಭಾಗ: ಚಿತ್ರದುರ್ಗ ಜಿಲ್ಲೆಯ ರಾಜ ವೀರ ಮದಕರಿ ನಾಯಕ ಪ್ರಥಮ, ಬೆಂಗಳೂರು ನಗರ ಬ್ರಾಂಡ್ ಬೆಂಗಳೂರಿನತ್ತ ದಿಟ್ಟ ಹೆಜ್ಜೆ ದ್ವಿತೀಯ, ತುಮಕೂರು ಜಿಲ್ಲೆ ನವ್ಯ ಮತ್ತು ಪ್ರಾಚೀನ ಶಿಲ್ಪ ಕಲಾ ಸಂಕೀರ್ಣ- ನಮ್ಮ ತುಮಕೂರು ಜಿಲ್ಲೆ ತೃತೀಯ.

ಕಲ್ಬುರ್ಗಿ ವಿಭಾಗ: ಬೀದರ್ ಜಿಲ್ಲೆಯ ಬೀದರ್ ಕೋಟೆ ಪ್ರಥಮ, ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ದ್ವಿತೀಯ, ವಿಜಯನಗರ ಜಿಲ್ಲೆಯ ವಿಶಿಷ್ಟ ವಿಜಯನಗರ- ವಿಜಯನಗರ ಜಿಲ್ಲೆಯ ವೈಶಿಷ್ಟ್ಯತೆಗಳು ತೃತೀಯ.

ಬೆಳಗಾವಿ ವಿಭಾಗ: ಗದಗ ಜಿಲ್ಲೆಯ ಜೋಡು ಕಳಸದ ಗುಡಿ ಪ್ರಥಮ, ಧಾರವಾಡ ಜಿಲ್ಲೆಯ ರಾಷ್ಟ್ರಧ್ವಜ ತಯಾರಿಕ ಕೇಂದ್ರ ಗರಗ, ಕಲಗಟಗಿ ಬಣ್ಣದ ತೊಟ್ಟಿಲು ಮತ್ತು ನವಲಗುಂದ ಜಮಖಾನ ದ್ವಿತೀಯ, ಬೆಳಗಾವಿ ಜಿಲ್ಲೆ ಶ್ರೀಮಹಾಕಾಳಿ ಮಾಯಕ್ಕ ದೇವಿ ಪ್ರಗತಿಯತ್ತ ಸಾಗೋಣ ತೃತೀಯ.

ಮೈಸೂರು ವಿಭಾಗ: ಚಾಮರಾಜನಗರ ಜಿಲ್ಲೆಯ ಪ್ರಕೃತಿಯ ಸೌಹಾರ್ದತೆಯೊಂದಿಗೆ ಪ್ರಗತಿಯತ್ತ ಸಾಗೋಣ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಬಿಂಬಿಸುವ ಕಲೆ ದೈವಾರಾಧನೆ ಸಾಂಪ್ರಾದಾಯಿಕ ಕ್ರೀಡೆ ದ್ವಿತೀಯ ಹಾಗು ಚಿಕ್ಕಮಗಳೂರು ಜಿಲ್ಲೆಯ ಜ್ಞಾನಿ ವಿಜ್ಞಾನಿಗಳ ನಾಡು ತೃತೀಯ ಸ್ಥಾನ ಪಡೆದಿವೆ.

ಕೇಂದ್ರ, ರಾಜ್ಯ ಹಾಗು ವಿವಿಧ ನಿಗಮಗಳ ವಿಭಾಗಗಳು:

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್) ವಿಜಯ ರನ್ ವೇ- ಭಾರತದ ಆಕಾಶಕ್ಕೆ ಎಚ್.ಎ.ಎಲ್ ನ ಶಕ್ತಿ ಸ್ಥಬ್ಧಚಿತ್ರಕ್ಕೆ ಪ್ರಥಮ ಸ್ಥಾನ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಡ್ರಗ್ಸ್- ಮುಕ್ತ ಕ್ಯಾಂಪಸ್ ಅಭಿಯಾನ ದ್ವಿತೀಯ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ, ಸುಂದರಿ ಸ್ವಚ್ಛ ಪರಿಸರ ತೃತೀಯ ಸ್ಥಾನ ಪಡೆದಿದೆ.

ಪ್ರವಾಸೋದ್ಯಮ ಇಲಾಖೆಯ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಸ್ಥಾಪನೆ ಸ್ಥಬ್ಧ ಚಿತ್ರಗಳಿಗೆ ಸಮಾಧಾನಕರ ಬಹುಮಾನ ದೊರೆತಿದೆ.

RELATED ARTICLES
- Advertisment -
Google search engine

Most Popular