Tuesday, October 7, 2025
Google search engine

Homeರಾಜ್ಯಸುದ್ದಿಜಾಲಬುರುಡೆ ಗ್ಯಾಂಗ್‌ ಮಾತು ಕೇಳಿ ತಪ್ಪು ಮಾಡಿದೆ, ವೀರೇಂದ್ರ ಹೆಗಡೆಯವರ ಕ್ಷಮೆ ಕೇಳ್ತೀನಿ : ಸುಜಾತಾ...

ಬುರುಡೆ ಗ್ಯಾಂಗ್‌ ಮಾತು ಕೇಳಿ ತಪ್ಪು ಮಾಡಿದೆ, ವೀರೇಂದ್ರ ಹೆಗಡೆಯವರ ಕ್ಷಮೆ ಕೇಳ್ತೀನಿ : ಸುಜಾತಾ ಭಟ್‌

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲು ಕೈಜೋಡಿಸಿದ್ದ ಸುಜಾತ ಭಟ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ವಾಸಂತಿ ಇನ್ನು ಬದುಕಿದ್ದಾಳೆ. ಎಸ್ಐಟಿ ತನಿಖೆ ನಡೆಸಲಿ ಎಂದು ಸುಜಾತ ಭಟ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ವಾಸಂತಿ ಸತ್ತಿಲ್ಲ ಇನ್ನು ಬದುಕಿದ್ದಾರೆ ನನಗೆ ನಂಬಿಕೆಯಿದೆ. ಸದ್ಯದಲ್ಲೇ ಅದರ ಬಗ್ಗೆ ಗೊತ್ತಾಗುತ್ತದೆ ಎಂದರು. ಯಾರದ್ದೋ ಮಾತು ಕೇಳಿ ನಾನು ನನ್ನ ಜೀವನ ಹಾಳು ಮಾಡಿಕೊಂಡೆ.. ಸುಮಾರು 60 ವರ್ಷದ ಜೀವನದಲ್ಲಿ ಇದುವರೆಗೆ ಯಾವುದೇ ಕಪ್ಪು ಚುಕ್ಕೆ ಬಂದಿಲ್ಲ.. ಆದರೆ ಬುರುಡೆ ಗ್ಯಾಂಗ್ ಸಹವಾಸ ಮಾಡಿ ದೊಡ್ಡ ತಪ್ಪು ಮಾಡಿದೆ ಎಂದು ಸುಜಾತ ಭಟ್ ತಿಳಿಸಿದರು.

ಮುಂದಿನ ವಾರದಲ್ಲಿ ಧರ್ಮಸ್ಥಳಕ್ಕ ಭೇಟಿ ನೀಡಬೇಕು ಎಂದುಕೊಂಡಿದ್ದೇನೆ, ಕೆಲವರ ಮಾತು ಕೇಳಿ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದ್ದೆ.. ಬಹಳ ಪಾಪ ಪ್ರಾಯಶ್ಚಿತ ಕಾಡುತ್ತಿದೆ. ಹೀಗಾಗಿ ಮಂಜುನಾಥ ಮತ್ತು ಅಣ್ಣಪ್ಪನಲ್ಲಿ ಕ್ಷಮೆ ಕೇಳ್ತೀನಿ.. ಹೀಗಾಗಿ ದೇವಸ್ಥಾನದ ಮುಂದೆ ದೀರ್ಘದಂಡ  ನಮಸ್ಕಾರ ಹಾಕುತ್ತೇನೆ ಎಂದು ಸುಜಾತ ಭಟ್ ತಿಳಿಸಿದರು.

ಕ್ಷೇತ್ರದ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಳಿ ಕೂಡ ಕ್ಷಮೆ ಕೇಳುತ್ತೇನೆ ಅವರು ನನ್ನನ್ನು ಕ್ಷಮಿಸುತ್ತಾರೆ ಎಂಬ ನಂಬಿಕೆಯಿದೆ. ಕ್ಷೇತ್ರಕ್ಕೆ ಕಲ್ಲು ಎಸೆಯುತ್ತೇನೆ ಎಂದಿದ್ದು ತಪ್ಪು ಹಾಗೆ ಹೇಳಬಾರದಿತ್ತು.. ..ಮಗಳು ಸೇರಿ ಎಲ್ಲವೂ ಸೃಷ್ಠಿ..ಶಿವಶಂಕರ್ ಎಂಬುವರು ಹೇಳು ಎಂದು ಒತ್ತಾಯಿಸಿದ್ದಕ್ಕೆ ಹೇಳಿದೆ ಎಂದರು.

ಬುರುಡೆ ಗ್ಯಾಂಗ್ ಗೂ ನನಗೂ ಸಂಬಂಧ ವಿಲ್ಲ, ಅವರ ಮಾತು ಕೇಳಿಯೇ ನಾನು ಕೆಟ್ಟೆ.. ಇನ್ನು ನನ್ನ ಮನೆ ಬಾಗಿಲಿಗೆ ಅವ್ರು ಬಂದೂ ಒಳಗೆ ಬಿಡಲ್ಲ…. ನನಗೆ ಜೀವನ ಮಾಡಲು ಹಣ ಇಲ್ಲ, ಎಸ್ ಐಟಿ ನವ್ರು ಮೊಬೈಲ್ ಕೊಡಿಸಿದ್ರು.. ಎಸ್ ಐಟಿಗೆ ಎಲ್ಲಾ ಸತ್ಯವನ್ನು ಹೇಳಿದ್ದೇನೆ.. ಇದರಿಂದ ಮುಕ್ತಿ ಸಿಕ್ಕರೆ ಸಾಕು ಎಂದು ಸುಜಾತ ಭಟ್ ಹೇಳಿದರು.

ಅನನ್ಯ ಭಟ್ ಮುಗಿದ ಆದ್ಯಾಯ.. ಧರ್ಮಸ್ಥಳಕ್ಕೆ ಹೋಗಿ ಬಂದ ಮೇಲೆ ಹೊಸ ಜೀವನ ಪ್ರಾರಂಭ ಮಾಡುತ್ತೇನೆ.. ಬಿಗ್ ಬಾಸ್ ಗೆ ಹೋಗುವ ಆಸೆ ಇದೆ.. ವೈಲ್ಡ್ ಕಾಲ್ಡ್ ಎಂಟ್ರಿ ಒಂದು ವಾರ ಹೋಗಬೇಕು.. ಆಟ ಆಡಲು ನಾನು ಹೋಗಲ್ಲ ಬದಲಿಗೆ ಕ್ಷಮೆ ಕೇಳೋಕೆ ಬಿಗ್ ಬಾಸ್ ಹೋಗುತ್ತೇನೆ ಎಂದ ಸುಜಾತ ಭಟ್ ತಿಳಿಸಿದರು.

RELATED ARTICLES
- Advertisment -
Google search engine

Most Popular