Tuesday, October 7, 2025
Google search engine

Homeಅಪರಾಧಮೈಸೂರಿನಲ್ಲಿ ಹಾಡ ಹಗಲೇ ಯುವಕನ ಬರ್ಬರ ಹತ್ಯೆ

ಮೈಸೂರಿನಲ್ಲಿ ಹಾಡ ಹಗಲೇ ಯುವಕನ ಬರ್ಬರ ಹತ್ಯೆ

ಮೈಸೂರು : ಮೈಸೂರಿನಲ್ಲಿ ಹಾಡ ಹಗಲೇ ಯುವಕನ ಬರ್ಬರ ಹತ್ಯೆಯಾಗಿದೆ. ಮೈಸೂರು ನಗರದ ವಸ್ತು ಪ್ರದರ್ಶನದ ಮುಂಭಾಗದ ಬಳಿ ಈ ಒಂದು ಘಟನೆ ನಡೆದಿದ್ದು, ಕ್ಯಾತಮಾರನಹಳ್ಳಿ ನಿವಾಸಿ ಗಿಲ್ಕಿ ವೆಂಕಟೇಶ್ ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕಣ್ಣಿಗೆ ಕಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ವೆಂಕಟೇಶ್ ನನ್ನ ಭೀಕರವಾಗಿ ಕೊಲೆ ಮಾಡಲಾಗಿದೆ.

ಕಾರಿನಲ್ಲಿ ಬಂದಿದ್ದ ಸುಮಾರು ಐದರಿಂದ ಆರು ಜನರು ದುಷ್ಕರ್ಮಿಗಳು ಈ ಒಂದು ಕೃತ್ಯ ಎಸಗಿದ್ದಾರೆ.ರೌಡಿಶೀಟರ್ ಕಾರ್ತಿಕ್ ಜೊತೆಗೆ ಈಗ ಕೊಲೆಯಾಗಿರುವ ವೆಂಕಟೇಶ ಗುರುತಿಸಿಕೊಂಡಿದ್ದ. ಕಳೆದ 5 ತಿಂಗಳ ಹಿಂದೆ ರೌಡಿಶೀಟರ್ ಕಾರ್ತಿಕ್ ಕೊಲೆಯಾಗಿದ್ದ. ಕಾರ್ತಿಕ್ ಮತ್ತು ವೆಂಕಟೇಶ ನಡುವೆ ಹಣಕಾಸಿನ ವ್ಯವಹಾರ ಇತ್ತು. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

RELATED ARTICLES
- Advertisment -
Google search engine

Most Popular