ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ತಾಲೂಕಿನ ಕೆಂಪನಕೊಪ್ಪಲು ಗ್ರಾಮದ ಪುಟ್ಟಸ್ವಾಮೀಗೌಡ(88) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಇವರಿಗೆ ದೊಡ್ಡೇಕೊಪ್ಪಲು ಗ್ರಾ.ಪಂ.ಸದಸ್ಯ ಕೆ.ಪಿ.ಜಗದೀಶ್ ಸೇರಿದಂತೆ ಮೂವರು ಪುತ್ರಿಯರು ಇದ್ದಾರೆ.
ಇವರ ಅಂತ್ಯಕ್ರಿಯೆಯು ನಾಳೆ ಬುಧವಾರ ಬೆಳಿಗ್ಗೆ 11 ಗಂಟೆಗೆ ಮೃತರ ಜಮೀನಿನಲ್ಲಿ ಅಪಾರ ಬಂಧು ಬಳಗದ ಸಮುಖದಲ್ಲಿ ನಡೆಯಲಿದೆ.
ಇವರ ನಿಧನಕ್ಕೆ ಶಾಸಕ.ಡಿ.ರವಿಶಂಕರ್, ಎಂಡಿಸಿಸಿ ಬ್ಯಾಂಕ್ ನಿರ್ಧೆಶಕ ದೊಡ್ಡಸ್ವಾಮೇಗೌಡ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ಜಿ.ಪಂ.ಮಾಜಿ ಸದಸ್ಯ ಮಾರ್ಚಹಳ್ಳಿ ಶಿವರಾಮ್, ಪುರಸಭೆ ಸದಸ್ಯ ಕೋಳಿಪ್ರಕಾಶ್, ಎಂ.ನಟರಾಜು, ತಾ.ಕುರುಬರ ಸಂಘದ ನಿರ್ಧೆಶಕರಾದ ಕೃಷ್ಣೇಗೌಡ, ರಾಮಕೃಷ್ಣೇಗೌಡ, ಜಿಲ್ಲಾ ಕುರುಬರ ಸಂಘದ ನಿರ್ಧೆಶಕ ಜಿ,ಎಂ, ಹೇಮಂತ್, ಮುಖಂಡ ಗಂಧನಹಳ್ಳಿ ವೆಂಕಟೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ರೈತ ಸಂಘಟನೆಯ ಮುಖಂಡ ಗರುಡಗಂಭ ಸ್ವಾಮಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.



