ಚಿಕ್ಕಬಳ್ಳಾಪುರ: ಶ್ರೀನಿವಾಸ ಸಾಗರ ಡ್ಯಾಂ ನಲ್ಲಿ ಪ್ರವಾಸಿಗರ ಹುಚ್ಚಾಟ ಅತಿರೇಕಕ್ಕೆ ಹೋಗಿ ಮುಟ್ಟಿದ್ದು, ಇದೀಗ ಜಲಪಾತದಲ್ಲಿ ಪ್ರತಿಷ್ಟಾಪಿಸಿದ ಗಂಗಮ್ಮ ದೇವಿ ವಿಗ್ರಹಕ್ಕೆ ಕೆಲ ಮುಸ್ಲಿಂ ಯುವತಿಯರು ಕಾಲು ಇಡುವ ಮೂಲಕ ದೇವಿಗೆ ಅವಮಾನ ಮಾಡಲಾಗಿದೆ.
ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರದಲ್ಲಿ ಸುಮಾರು 50 ಅಡಿ ಎತ್ತರದಿಂದ ನೀರು ಧುಮುಕುತ್ತಿದ್ದು, ಇದನ್ನು ವೀಕ್ಷಿಸಲು ದಿನನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ಪ್ರವಾಸಕ್ಕೆ ಬಂದ ಮುಸ್ಲಿಂ ಕುಟುಂಬವೊಂದು ನೀರಿನಲ್ಲಿ ಆಟವಾಡುತ್ತಾ ದೇವಿಯ ತಲೆ ಮೇಲೆ ಕಾಲಿಟ್ಟಿದ್ದಾರೆ.
ಯುವತಿಯರ ಹುಚ್ಚಾಟವನ್ನು ಉಳಿದ ಪ್ರವಾಸಿಗರು ನೋಡಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ಕೂಡಲೇ ಮುಸ್ಲಿಂ ಯುವತಿಯರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿದೆ.
ಸಾಗರ ಡ್ಯಾಂ ನ ಕೆಳಕ್ಕೆ ಗಂಗಮ್ಮ ದೇವಿಯ ಮೂರ್ತಿಯನ್ನು ಇಡಲಾಗಿದೆ. ಇದೀಗ ಈ ರೀತಿಯ ದುರ್ಘಟನೆಗಳು ನಡೆಯುತ್ತಿರುವುದರಿಂದ ದೇವಿಗೆ ಅವಮಾನ ಮಾಡಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲೇಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ದೇವಿಯ ಮೂರ್ತಿ ಎಂದು ತಿಳಿದರೂ ಕೂಡ ಕಾಲನ್ನು ಕೆಳಕ್ಕೆ ತೆಗೆಯದೆ ದುರ್ವತನೆ ತೋರಿದ್ದು, ಇದನ್ನು ಅಲ್ಲಿಗೆ ಬಂದ ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಹಿಂದೂಗಳ ಆರಾಧ್ಯ ದೈವ ಗಂಗಮ್ಮ ದೇವಿ ವಿಗ್ರಹಕ್ಕೆ ಅಪಮಾನ ಮಾಡಿದ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.