Friday, October 10, 2025
Google search engine

Homeಅಪರಾಧಬಾಲಕಿ ರೇಪ್ ಅಂಡ್ ಮರ್ಡರ್ ಕೇಸ್: ಕೊಲೆ ಆರೋಪಿ ಗುರುತು ಪತ್ತೆ

ಬಾಲಕಿ ರೇಪ್ ಅಂಡ್ ಮರ್ಡರ್ ಕೇಸ್: ಕೊಲೆ ಆರೋಪಿ ಗುರುತು ಪತ್ತೆ

ಮೈಸೂರು: ಮೈಸೂರಿನಲ್ಲಿ ನಡೆದ ಹತ್ಯೆಯೊಂದು ಕ್ಷಣಕಾಲ ಭೀತಿಗೆ ಕಾರಣವಾಗಿದ್ದರೂ, ನಗರ ಪೊಲೀಸರಿಂದ ನಡೆಸಲಾದ ವೇಗದ ಕಾರ್ಯಾಚರಣೆಯು ಪ್ರಕರಣದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ (31) ಎನ್ನುವವನನ್ನು ಪೊಲೀಸರು ಬಂಧಿಸಿದ್ದಾರೆ. ಈತ ನಾಲ್ಕು ತಿಂಗಳುಗಳ ಹಿಂದೆ ಮಾತ್ರ ಜೈಲಿನಿಂದ ಬಿಡುಗಡೆಗೊಂಡಿದ್ದ ಮಾಜಿ ಕೈದಿಯಾಗಿದ್ದು, ಪೊಲೀಸರ ಪ್ರಕಾರ, ಕಾರ್ತಿಕ್ ಜೈಲಿನಿಂದ ಬಿಡುಗಡೆಯಾದ ಬಳಿಕ ಊರಿಗೆ ಮರಳಿ ನೆಲೆಸದೆ, ಮದ್ಯ ಸೇವನೆ ಮಾಡುತ್ತಾ ನಗರದ ವಿವಿಧ ಭಾಗಗಳಲ್ಲಿ ಅಲೆಯುತ್ತಿದ್ದ. ಸಾರ್ವಜನಿಕ ಸ್ಥಳಗಳಲ್ಲಿ ಅವ್ಯವಹಾರ ನಡೆಸುತ್ತಿದ್ದ ಈತನ ಬಗ್ಗೆ ನಿವಾಸಿಗಳ ಆತಂಕವೂ ಹೆಚ್ಚಾಗಿತ್ತು.

ಇತ್ತೀಚೆಗೆ ನಡೆದ ಹತ್ಯೆ ಪ್ರಕರಣದ ಬಳಿಕ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿದರು. ಅದರಿಂದ ಈತನ ಗುರುತು ಬಹಳ ಸ್ಪಷ್ಟವಾಗಿ ಸಿಕ್ಕಿತ್ತು. ಇದನ್ನು ಆಧಾರಮಾಡಿಕೊಂಡು ಪೊಲೀಸರು ಸಾಕಷ್ಟು ಸ್ಮಾರ್ಟ್ ಕಾರ್ಯಾಚರಣೆಯ ಮೂಲಕ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಲು ಯಶಸ್ವಿಯಾಗಿದ್ದಾರೆ.

“ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಾವು ಆರೋಪಿಯ ತಕ್ಷಣದ ಚಲನೆಯನ್ನು ಪತ್ತೆಹಚ್ಚಿದ್ವಿ. ಈ ದೃಶ್ಯಾವಳಿಗಳು ನಮಗೆ ಪ್ರಕರಣದ ತಿರುವು ನೀಡಿದವು. ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ,” ಎಂದು ತನಿಖೆಗೆ ನೇತೃತ್ವ ನೀಡಿದ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕಾರ್ತಿಕ್‍ನ ಹಿಂದೆ ಇತರೆ ಅಪರಾಧ ಪ್ರಕರಣಗಳೂ ಇರಬಹುದೆಂಬ ಅನುಮಾನವನ್ನು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಪೊಲೀಸರು ಈತನ ಹಿಂದಿನ ಚಟುವಟಿಕೆಗಳನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದು, ಇತರ ಪ್ರಕರಣಗಳಲ್ಲಿಯೂ ಈತ ಕೈವಾಡವಿದೆಯೇ ಎಂಬುದನ್ನು ತನಿಖೆ ಮಾಡುತ್ತಿದ್ದಾರೆ.

RELATED ARTICLES
- Advertisment -
Google search engine

Most Popular