ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಏಷ್ಯಾದ ಅತಿ ದೊಡ್ಡ ಹಾರ್ಸ್ ಶೋ ಆದಂತಹ ರಾಯಲ್ಟಿ ಹಾರ್ಸ್ ಶೋ-2025 ನಲ್ಲಿ ಮೈಸೂರಿನ ಯುವ ಉದ್ಯಮಿ ಸಾ.ರಾ. ಜಯಂತ್ ಸಾಕಿರುವ ರೋಲೆಕ್ಸ್ ಕುದುರೆಗೆ ಇಂಡಿಯಾದ ನಂಬರ್ ಒನ್ ಚಾಂಪಿಯನ್ ಅವಾರ್ಡ್ ಲಭಿಸಿದೆ.
ಶನಿವಾರ ಬೆಂಗಳೂರಿನ ಯಲಹಂಕದಲ್ಲಿ ಮಾರ್ವಾರಿ ಹಾರ್ಸ್ ಶೋ ಆಯೋಜಿಸಿದ್ದ ಈ ಸ್ಪರ್ದೆಯಲ್ಲಿ ಮಾಜಿ ಸಚಿವ ಸಾ. ರಾ. ಮಹೇಶ್ ರವರ ಪುತ್ರರಾದ ಸಾ.ರಾ. ಜಯಂತ್ ರವರ ಒಡೆತನದಲ್ಲಿ ಮೈಸೂರಿನ ಸಾ.ರಾ. ಫಾರಂ ನಲ್ಲಿ ಸಾಕಿರುವ 28 ತಿಂಗಳ ರೋಲೆಕ್ಸ್ ಕುದುರೆಗೆ ಈ ಅವಾರ್ಡ್ ದೊರೆತಿದೆ.

ಈ ಅವಾರ್ಡ್ ನ ಜತಗೆ 1 ಲಕ್ಷ ನಗದು ಬಹುಮಾನ ದೊರಕಿದ್ದು, ಈ ಸ್ಪರ್ಧೆಯಲ್ಲಿ
ಗುಜರಾತ್, ರಾಜಸ್ಥಾನ, ಪಂಜಾಬ್ ರಾಜ್ಯಗಳು ಸೇರಿ ದೇಶದ ವಿವಿಧ ಭಾಗಗಳಿಂದ ಕುದುರೆಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು.
ಈ ಕುದುರೆಯ ಬಾಡಿ ಲೈನ್ , ನಡಿಗೆ, ಎರಡುಹಲ್ಲು, 64 ಇಂಚು ಹೈಟ್, ಕಾಲಿನ ಊಗುರು, ಕೂದಲು, ಬಾಡಿ ಸೈನಿಂಗ್, ಜನಗಳ ಜೊತೆ ಕುದುರೆಯ ನಡತೆ ಸೇರಿದಂತೆ ಇನ್ನಿತರ ಮಾನದಂಡಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಕೊಂಡ ಕಾರಣ ಈ ಕುದುರೆಗೆ ಈ ಅವಾರ್ಡ್ ಸಿಗಲು ಕಾರಣವಾಗಿದೆ
ಉದ್ಯಮಿ ಅಗಿರುವ ಸಾ.ರಾ.ಜಯಂತ್ ಅವರು ತಮ್ಮ ಮೈಸೂರಿನ ದಟ್ಟಗಹಳ್ಳಿಯಲ್ಲಿ ಇರುವ ಸಾ.ರಾ.ಪಾರಂ.ನಲ್ಲಿ ವಿವಿಧ ಸಾಕು ಪ್ರಾಣಿಗಳನ್ನ ಸಾಕುವ ಮೂಲಕ ಪ್ರಾಣಿ ಪ್ರಿಯ ಪ್ರೇಮಿ ಅಗಿದ್ದು ಇವರು ಸಾಕಿದ್ದ ಚಿಂಟು ಹೆಸರಿನ ಕೋತಿಯೊಂದು ಮೃತಪಟ್ಟಾಗ ಅದರ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸಿದ್ದು ರಾಜ್ಯದಲ್ಲಿಯೇ ಗಮನ ಸೆಳೆದಿತ್ತು.