ವರದಿ: ಸ್ಟೀಫನ್ ಜೇಮ್ಸ್
ಬೋರಗಾಂವ: ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಮತ್ತು ಎಥೆನಾಲ್‌ಗೆ ಹೆಚ್ಚಿನ ಬೇಡಿಕೆಯಿದೆ. ಕಬ್ಬಿನಿಂದ ವಿದ್ಯುತ್ ಮತ್ತು ಅನಿಲ ಉತ್ಪಾದಿಸಲಾಗುತ್ತಿದೆ. ಆದರೆ, ರೈತರಿಗೆ ಬಿಲ್ ಪಾವತಿಸಲು ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಮಾಜಿ ಸಂಸದ ರಾಜು ಶೆಟ್ಟಿ ವಿಷಾದಿಸಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿ, ಕಬ್ಬು ಸಾಗಣೆ, ಕಟಾವು ವಿಷಯದಲ್ಲಿ ಕಾರ್ಖಾನೆಗಳು ಸುಲಿಗೆ ಮಾಡುತ್ತಿವೆ. ರೈತರು ಎಚ್ಚರಗೊಳ್ಳಬೇಕು. ಈ ವರ್ಷ ಕಬ್ಬು ಬೆಳೆಯುವ ಪ್ರದೇಶ ಕಡಿಮೆಯಾಗಿದೆ. ಕಾರ್ಖಾನೆಗಳು ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸಿವೆ. ಆದ್ದರಿಂದ ಕಬ್ಬು ಪೂರೈಸಲು ಅವಸರ ಮಾಡಬೇಡಿ, ಕಾರ್ಖಾನೆಗಳು ಕಪ್ಪು ಮಾರುಕಟ್ಟೆಯಲ್ಲಿ ಸಕ್ಕರೆ ಮಾರಾಟ ಮಾಡುತ್ತಿವೆ ಮತ್ತು ಕಡಿಮೆ ಇಳುವರಿ ತೋರಿಸುತ್ತಿವೆ. ಅ.೧೬ರಂದು ನಡೆಯುವ ೨೪ನೇ ಕಬ್ಬು ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಯವಂತೆ ಮನವಿ ಮಾಡಿದರು.
ಕರ್ನಾಟಕ ರೈತ ಸಂಘದ ಅಧ್ಯಕ್ಷ ಗಣೇಶ ಇಳಿಗಾರ ಮಾತನಾಡಿ, ರಾಜ್ಯ ಸಕ್ಕರೆ ಸಚಿವ ಶಿವಾನಂದ ಪಾಟೀಲ ಕಬ್ಬಿಗೆ ಎಂಆರ್‌ಪಿ ಬೆಲೆ ನೀಡುವುದಾಗಿ ಹೇಳಿ ರೈತರನ್ನು ವಂಚಿಸಿದ್ದಾರೆ. ಈ ಕುರಿತು ಶೀಘ್ರದಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುತ್ತೇವೆ. ಸಕ್ಕರೆ ಸಚಿವರು ಇದರ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.
ರಾಜು ಖಿಚಡೆ, ತಾತ್ಯಾಸಾಹೇಬ ಕೇಸ್ತೆ, ಬಂಟಿ ಪಾಟೀಲ, ಶೀತಲ ಸೋಬಾನೆ, ಅಭಿಜಿತ್ ಬಿರನಾಳೆ ಮಾತನಾಡಿದರು.
ದರಿಖಾನ್ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು. ರೈತ ಮುಖಂಡ ಸುನೀಲ ಪಾಟೀಲ, ಅನ್ನಾಸೋ ಪವಾರ, ರಾಜು ಖಿಚಡೆ, ತಾತ್ಯಾಸಾಹೇಬ ಬಸಣ್ಣನವರ, ರಮೇಶ ಮಾಲಗಾವೆ, ಪಂಕಜ ತಿಪ್ಪನವರ, ಚವ್ಹಾಣ ಸಾಹೇಬ, ತಾತ್ಯಾಸಾಹೇಬ ಕೇಸ್ತೆ, ರಮೇಶ ಪಾಟೀಲ, ಅಜಿತ್ ರೊಡ್ಡ, ನೈನೇಶ ಪಾಟೀಲ, ಆದಿನಾಥ ಜಂಗಟೆ, ಅಭಯ ಪಾಟೀಲ, ಸುಭಾಷ ಚೌಗುಲೆ, ಶಶಿರ ಸಾತಪೂತೆ, ಶಿವಾಜಿ ಭೋರೆ, ಪಿಂಟು ಚೌಗುಲೆ, ಸಂದೀಪ ಚಿಪರೆ, ಅಕ್ಷಯ ಪವಾರ, ಅಭಿನಂದನ ಫಿರಗನ್ನವರ, ಪೋಪಟ್ ಪಾಟೀಲ ಇತರರಿದ್ದರು.