ಬೆಳಗಾವಿ : ಬೆಳಗಾವಿಯ ಕಾಡಾ ಕಚೇರಿಯಲ್ಲಿ ಕಾಡಾ ನೂತನ ಅಧ್ಯಕ್ಷ ಯುವರಾಜ್ ಕದಮ್ ಅಧಿಕಾರ ಸ್ವೀಕರಿಸಿದರು. ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಳರ್ ಉಪಸ್ಥಿತಿಯಲ್ಲಿ ಕದಮ್ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಡಾ ಅಧ್ಯಕ್ಷ ಯುವರಾಜ್ ಕದಮ್, ನನ್ನ ಸೇವೆಯನ್ನು ಗುರುತಿಸಿ ಪಕ್ಷ ಅವಕಾಶ ನೀಡಿದೆ. ಅದನ್ನು ಬಳಸಿಕೊಂಡು ಬಡವರ ಪರವಾಗಿ ಕೆಲಸ ಮಾಡುತ್ತೇನೆ. ಯೋಜನೆಗಳ ಅನುಷ್ಠಾನಕ್ಕೆ ಕ್ರಮ ವಹಿಸುತ್ತೇನೆ ಎಂದರು. ಈ ವೇಳೆ ಶಾಸಕ ರಾಜು ಕಾಗೆ, ಮಾಜಿ ಶಾಸಕ ಶಾಮ್ ಘಾಟಗೆ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹೊಟ್ಟಿಹೊಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಇತರರಿದ್ದರು.