Tuesday, October 14, 2025
Google search engine

Homeಅಪರಾಧಅಕ್ರಮ ಮದ್ಯ ಸಂಗ್ರಹಿಸಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ 128 ಲಿ.ಗೋವಾ ಮದ್ಯ ವಶ.

ಅಕ್ರಮ ಮದ್ಯ ಸಂಗ್ರಹಿಸಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ 128 ಲಿ.ಗೋವಾ ಮದ್ಯ ವಶ.

ವರದಿ: ಸ್ಟೀಫನ್ ಜೇಮ್ಸ್..

ಬೆಳಗಾವಿ: ನಗರದ ಶಹಪೂರದ ಹುಲಬತ್ತಿ ಕಾಲೋನಿಯ

ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದ ಅಡ್ಡೆಯ ಮೇಲೆ ಪೊಲೀಸರು ಭಾನುವಾರ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಸಂಗ್ರಹಿಸಿಟ್ಟಿದ್ದ 128 ಲೀಟರ್ ಗೋವಾ ಮದ್ಯವನ್ನು ವಶ ಪಡಿಸಿಕೊಂಡಿದ್ದಾರೆ.

ಹುದಲಿ ಗ್ರಾಮದ ನಿವಾಸಿ ಮಂಜುನಾಥ ಮಲಗೌಡ ಗಿಡಗೇರಿ(೨೫),ತಾನಾಜಿ ಗಲ್ಲಿಯ ಯತಿರಾಜ ರಾಮಚಂದ್ರ ಪರದೆ( 28) ಬಂಧಿತ ಆರೋಪಿಗಳು. ಇವರು ದ್ವಿಚಕ್ರ ವಾಹನದ ಮೇಲೆ ಮದ್ಯ ಸಾಗಿಸುತ್ತಿದ್ದ ವೇಳೆ ಪೊಲೀಸರು ತಪಾಸಣೆ ನಡೆಸಿದಾಗ ಅಕ್ರಮ ಗೋವಾ ಮದ್ಯ ಸಂಗ್ರಹಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಂಧಿತರಿಂದ 128ಲಿ.ಮದ್ಯ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಾರ್ಕೆಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES
- Advertisment -
Google search engine

Most Popular