Wednesday, October 15, 2025
Google search engine

Homeರಾಜ್ಯಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ : ಸದ್ಯದಲ್ಲೇ ʼಅಪ್ಪು ಆ್ಯಪ್ʼ ಬಿಡುಗಡೆ

ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ : ಸದ್ಯದಲ್ಲೇ ʼಅಪ್ಪು ಆ್ಯಪ್ʼ ಬಿಡುಗಡೆ

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಪ್ರತಿಮ ಪ್ರತಿಭೆಯಿಂದಲೆ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದ ನಟರಾಗಿದ್ದಾರೆ. ಈ ನಡುವೆ ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು ಶೀಘ್ರದಲ್ಲೇ “ಅಪ್ಪು” ಆ್ಯಪ್ ಲಾಂಚ್ ಮಾಡುವ ಕುರಿತು ಅಶ್ವಿನಿ ಪುನೀತ್ ಗುಡ್ ನ್ಯೂಸ್ ನೀಡಿದ್ದಾರೆ.

ಅ. 29ಕ್ಕೆ ಪುನೀತ್ ರಾಜ್ ಕುಮಾರ್ ನಿಧನರಾಗಿ ನಾಲ್ಕು ವರ್ಷ ಕಳೆಯಲಿದೆ. ಹೀಗಾಗಿ ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಸ್ಮರಣೆಯಲ್ಲಿ ಜನಸ್ನೇಹಿ ಅಪ್ಲಿಕೇಶನ್ ಒಂದನ್ನು ಲೋಕಾರ್ಪಣೆ ಮಾಡಲು ಸಿದ್ದರಾಗಿದ್ದಾರೆ. ಆ್ಯಪ್ ಲಾಂಚ್ ಗೆ ಈಗಾಗಲೇ ತಯಾರಿ ಮಾಡಿಕೊಳ್ಳಲಾಗಿದ್ದು ಅಪ್ಲಿಕೇಶನ್ ಲಾಂಚ್ ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಅಶ್ವಿನಿ ಆಹ್ವಾನ ನೀಡಿದ್ದಾರೆ. ಸದ್ಯ ಈ ಫೋಟೋ ಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಪುನೀತ್ ರಾಜ್ ಕುಮಾರ್ ಅವರ ಈ ಅಪ್ಲಿಕೇಶನ್ಗೆ ‘ಪಿಆರ್ಕೆ’ ಎಂದು ಹೆಸರು ಇಡಲಾಗಿದ್ದು ಅ. 25 ಕ್ಕೆ ಅಪ್ಪು ಆ್ಯಪ್ ಕುರಿತು ಸುದ್ದಿಗೋಷ್ಠಿ ಇರಲಿದೆ. ಈ ಆ್ಯಪ್ ನಲ್ಲಿ ಪುನೀತ್ ರಾಜಕುಮಾರ್ ಅವರ ಕಲಾ ಪ್ರತಿಭೆ, ಸಮಾಜಸೇವೆ, ಮಾನವೀಯ ಕೆಲಸವನ್ನು ಜನರಿಗೆ ಪಸರಿಸುವಂತೆ ಮಾಡಲು ಹಾಗೂ ಸ್ಫೂರ್ತಿ ತುಂಬಲು ಈ ಅಪ್ಲಿಕೇಶನ್ ನ್ನು ಜಾರಿ ಮಾಡಲಾಗುತ್ತಿದೆ. ಅಪ್ಪು ಆ್ಯಪ್ ನ್ನು ಡಿಸಿಎಂ ಡಿಕೆಶಿವಕುಮಾರ್ ಲಾಂಚ್ ಮಾಡಲಿದ್ದಾರೆ.

RELATED ARTICLES
- Advertisment -
Google search engine

Most Popular