Thursday, October 16, 2025
Google search engine

Homeಅಪರಾಧಗೋವಾಕ್ಕೆ ಕಳ್ಳಸಾಗಾಣಿಕೆ ಆಗುತ್ತಿದ್ದ 14 ಮಕ್ಕಳ ರಕ್ಷಣೆ

ಗೋವಾಕ್ಕೆ ಕಳ್ಳಸಾಗಾಣಿಕೆ ಆಗುತ್ತಿದ್ದ 14 ಮಕ್ಕಳ ರಕ್ಷಣೆ

ವರದಿ: ಸ್ಟೀಫನ್ ಜೇಮ್ಸ್.

ರಾಂಚಿ: ಒಬ್ಬ ಬಾಲಕಿ ಸೇರಿದಂತೆ 13 ಮಕ್ಕಳನ್ನು ರೈಲ್ವೆ ರಕ್ಷಣಾ ದಳದ ಪೊಲೀಸರು ಜಾರ್ಖಂಡ್‌ನ ರಾಂಚಿ ಬಳಿಯ ಮೂಚಿ ರೈಲು ನಿಲ್ದಾಣದಲ್ಲಿ ರಕ್ಷಿಸಿದ್ದಾರೆ.

ರಾಂಚಿಯಿಂದ ವಾಸ್ಕೊ-ಡ-ಗಾಮಾ ವಿಶೇಷ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಗೋವಾಕ್ಕೆ ಮಾನವ ಕಳ್ಳಸಾಗಣೆ ಆಗುತ್ತಿದ್ದ ಮಕ್ಕಳ ರಕ್ಷಣೆ ಮಾಡಲಾಗಿದೆ.‌ ಮಕ್ಕಳು ಮಾನವ ಕಳ್ಳಸಾಗಣೆ ಆಗುತ್ತಿದ್ದಾರೆ ಎಂಬ ಅನುಮಾನದ ಮೇಲೆ ಖಚಿತ ಮಾಹಿತ ಆಧಾರದ ಮೇಲೆ ಆರ್‌ಪಿಎಫ್ ಪೊಲೀಸರು ಮೂಚಿ ರೈಲು ನಿಲ್ದಾಣದ ಬಳಿ ಬೋಗಿಯನ್ನು ಪರಿಶೀಲಿಸಿದರು. ಆಗ ಮಕ್ಕಳು ಇರುವುದು ಕಂಡು ಬಂತು. ಪೊಲೀಸರ ಪ್ರಶ್ನೆಗೆ ಮಕ್ಕಳು ಸರಿಯಾಗಿ ಉತ್ತರ ನೀಡಲಿಲ್ಲ. ಹೀಗಾಗಿ ಮಕ್ಕಳನ್ನು ರಕ್ಷಿಸಿ, ಸ್ಥಳೀಯ ಮಕ್ಕಳ ರಕ್ಷಣಾ ಘಟಕದಲ್ಲಿರಿಸಲಾಗಿದೆ ಎಂದು ಆರ್‌ಪಿಎಫ್ ರಾಂಚಿ ಪೊಲೀಸರು ತಿಳಿಸಿದ್ದಾರೆ.

ಸಾಂಧರ್ಭಿಕ ಚಿತ್ರ

ನಾವು ಗೋವಾಕ್ಕೆ ಹೋಗುತ್ತಿದ್ದೇವೆ. ಅಲ್ಲಿ ಒಬ್ಬ ವ್ಯಕ್ತಿ ಬಂದು ಕೆಲಸ ಕೊಡಿಸುತ್ತೇನೆ ಎಂದು ಹೇಳಿದ್ದಾನೆ. ನಮಗೆ ಅಷ್ಟೇ ಗೊತ್ತಿರೋದು ಎಂದು ಮಕ್ಕಳು ಹೇಳಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಜಾರ್ಖಂಡ್ ಜಿಆರ್‌ಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular