ವರದಿ : ಸ್ಟೀಫನ್ ಜೇಮ್ಸ್ ..ಬೆಳಗಾವಿ
ಬೆಳಗಾವಿ
ಸಾವಿರಾರು ಜನ ಹೂಡಿಕೆದಾರರು ಮತ್ತು ಠೇವಣಿದಾರರನ್ನು ಮೋಸ ಮಾಡಿದ ಬೆಳಗಾಂ ಡಿಸ್ಟಿಕ್ಸ್ ವೆಜಿಟೆಬಲ್ ಗ್ಲೋವರ್ಸ್ ಸೇಲರ್ಸ್ ಪರ್ಚೆಜರ್ ಕೋ-ಆಫ್ ಸೊಸೈಟಿ ಲಿ. ಪೋರ್ಟ್ ರೋಡ್ ಬೆಲಗಾಂಮ, ಬೆಲಗಾಂಮ ಹೋಲ್‌ಸೇಲ್ ವೆಜಿಟೆಬಲ್ ಮರ್ಚ್ಂಟ್ಸ್ ಮಲ್ಟಿಪರ್ಪಸ್ ಕೋ ಆಸ್ ಸೊಸೈಟಿ ಲಿ. ಕಾಮತ ಗಲ್ಲಿ ಬೆಲಗಾಂಮ, ಶ್ರೀ ಕಪಿಲನಾಥ ಕ್ರೀಡಿಟ್ ಸೌಹಾರ್ದ ಸಹಕಾರಿ ಲಿ. ಮಹಾದ್ವಾರ ರೋಡ್ ಬೆಳಗಾವಿ, ಮೆಜೈ ಕಿಸಾನ ಹೊಲಸೇಲ್ ವೆಜಿಟೆಬಲ್ ಮರ್ಚ್ಂಟ್ಸ್ ಅಸೊಶಿಯೇಶನ್, ಸಂಕಲ್ಪ್ ಕ್ರೆಡಿಟ್ ಸೊಸೈಟಿ ಸಹಕಾರಿ ಸಂಸ್ಥೆಗಳ ನಿರ್ದೇಶಕ ಮಂಡಳಿ ಹಾಗೂ ಸಂಬಂಧಿತ ಸಿಬ್ಬಂದಿಗಳ ವಿರುದ್ಧ ಬಿಎಸ್ ಎನ್ ಕಾಯ್ಸೆಯಡಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ತರಕಾರಿ ಬೆಳಗಾರ ರೈತರು ಕೂಲಿ ಕಾರ್ಮಿಕರು ಮತ್ತು ಸಣ್ಣ ತರಕಾರಿ ವ್ಯಾಪಾರಿಗಳಾಗಿದ್ದು ಜೈ ಕಿಸಾನ್ ಸಂಸ್ಥೆಗಳಲ್ಲಿ ಠೇವಣಿ ಹಾಗೂ ಉಳಿತಾಯ ಹಾಗೂ ಇತರೆ ಖಾತೆಗಳ ಮೂಲಕ ನಮ್ಮ ಜೀವನದ ಅಳಿಯಾ ಹಣವನ್ನು ಹೂಡಿಕೆ ಮಾಡಿದ್ದೇವು. ನಾವು ಎಲ್ಲರೂ ಆರ್ಥಿಕ ದೂರ್ಬಲ ವರ್ಗದವರು. ಆದರೆ ಕೆಲ ಸಂಸ್ಥೆಗಳ ನಿರ್ದೇಶಕ ಮಂಡಳಿಗಳು ನಮ್ಮ ಹಣವನ್ನು ದುರಪಯೋಗ ಪಡಿಸಿಕೊಂಡು ಅವ್ಯವಹಾರ ಮಾಡಿ ನಮ್ಮನ್ನು ಮೋಸ ಮಾಡಿದ್ದಾರೆ ಎಂದು ನೊಂದ ಠೇವಣಿದಾರರು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹಲವಾರು ಬಾರಿ ಠೇವಣಿ ಹಣ ಉಳಿತಾಯ ಹಣವನ್ನು ವಾಪಸ್ ನೀಡಲು ಮನವಿ ಮಾಡಿದರೂ ಸಂಬಂಧಿಸಿದವರು ಹಣ ಮರುಳಿಸಿರಲಿಲ್ಲ . ಮಂಡಳಿಯ ಸದಸ್ಯರು ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ಹಾಗೂ ಕೆಲವರು ನಮ್ಮ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಪಟ್ಟವರಾಗಿರುವುದರಿಂದ ನಾವು ವೈಯಕ್ತಿಕವಾಗಿ ಕಾನೂನು ಹೋರಾಟ ನಡೆಸಲು ಹೆದರುತ್ತಿದ್ದೇವೆ. ಈ ಸಂಸ್ಥೆಗಳ ನಿರ್ದೇಶಕ ಮಂಡಳಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಜನರಿಂದ ಸಂಗ್ರಹಿಸಿದ ಹಣವನ್ನು ಮರಳಿ ಕೊಡಿಸಬೇಕೆಂದು ನೊಂದ ಠೇವಣಿದಾರರು ದೂರು ದಾಖಲಿಸಿದ್ದರು.
ಠೇವಣಿದಾರರ ದೂರು ದಾಖಲಿಸಿಕೊಂಡಿರುವ ಪೊಲೀಸರು ಬಿಎನ್ ಎಸ್ ಎಸ್ ಕಾಯ್ದೆ ಪ್ರಕಾರ ಪ್ರಾಥಮಿಕ ವಿಚಾರಣೆ ಕೈಗೊಂಡು ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.