ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಮಾಯಿಗೌಡನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ವಡ್ಡರಕೊಪ್ಪಲು ಗ್ರಾಮದಲ್ಲಿ ಶನಿವಾರ ಬಿದ್ದ ಭಾರಿ ಮಳೆಗೆ ಮನೆ ಕುಸಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಗ್ರಾಮದ ಮಧುಕಾಳೇಗೌಡ ಎಂಬುವರಿಗೆ ಸೇರಿದ ಮನೆ ಮಳೆಗೆ ಕುಸಿದು ಬಿದ್ದಿದ್ದು ಇದರಿಂದ ಮನೆಯಲ್ಲಿದ್ದ ಬಟ್ಟೆ, ಪಾತ್ರೆ ದಿನಸಿ ಸಾಮಾಗ್ರಿಗಳು, ಭತ್ತ ಸೇರಿದಂತೆ ಅಪಾರ ವಸ್ತುಗಳು ಹಾನಿಗೊಳಗಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದರಿಂದ ಸುಮಾರು 5 ಲಕ್ಷ ರೂ ನಷ್ಟ ಸಂಭವಿಸಿದ್ದು, ಘಟನೆಯಿಂದ ಮಧು ಅವರ ಕುಟುಂಬಕ್ಕೆ ಅರ್ಥಿಕ ನಷ್ಟ ಉಂಟಾಗಿದ್ದು ಇವರಿಗೆ ಸರ್ಕಾರ ಸೂಕ್ತ ಪರಿಹಾರ ಮತ್ತು ಆಶ್ರಯ ಮನೆ ಮಂಜೂರು ಮಾಡ ಬೇಕೆಂದು ಮಾಜಿ ಗ್ರಾ.ಪಂ.ಸದಸ್ಯ ಸಿ.ಡಿ.ಪ್ರಭಾಕರ್, ವಡ್ಡರಕೊಪ್ಪಕಲು ಡೈರಿ ಕಾರ್ಯದರ್ಶಿ ವಿ.ಜಿ.ಉಮೇಶ್ ಮನವಿ ಮಾಡಿದ್ದಾರೆ.



                                    