ವರದಿ: ವಿನಯ್ ದೊಡ್ಡಕೊಪ್ಪಲು
ಕೆ ಆರ್ ನಗರ : ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಎಚ್.ಸಿ.ಕರುಣ, ಉಪಾಧ್ಯಕ್ಷ ಅಶೋಕ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಸಿ.ಕರುಣ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ್ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮ ಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಹಾಲಿ ಅಧ್ಯಕ್ಷ ಎಚ್.ಎಸ್.ಲೋಕೇಶ್ ಮತ್ತು ಉಪಾಧ್ಯಕ್ಷ ಎಚ್.ಬಿ.ಜಾಕಿ ಪ್ರಕಾಶ್ ಅವರ ರಾಜಿನಾಮೇಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಕೆ.ಅರ್.ನಗರ ಸಹಕಾರ ಇಲಾಖೆಯ ಸಿಡಿಓ ಎಸ್. ರವಿ ಕಾರ್ಯನಿರ್ವಹಿಸಿದರು.
ನಂತರ ನೂತನ ಅಧ್ಯಕ್ಷ ಕರುಣ , ಉಪಾಧ್ಯಕ್ಷ ಅಶೋಕ್, ತಾ.ಪಂ.ಮಾಜಿ ಸದಸ್ಯ ಚಿಕ್ಕೇಗೌಡ, ಚಿಬುಕಹಳ್ಳಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಎಸ್.ವೆಂಕಟೇಶ್, ಗ್ರಾ.ಪಂ.ಸದಸ್ಯ ದೇವೆಂದ್ರ, ಮುಖಂಡರಾದ ಪುಟ್ಟರಾಜು, ಮಹೇಶ್, ಸಿದ್ದರಾಮೇಗೌಡ, ಎಚ್.ಎಂ.ಗಣೇಶ್ , ಎಚ್.ಎಸ್.ಮಹದೇವ ಮಾದೇಗೌಡ, ಸ್ವಾಮೀಗೌಡ, ಯೋಗೇಶ್, ಕೇಬಲ್ ಲೋಕಿ, ಎಚ್.ಎನ್.ಗಣೇಶ, ಮತ್ತಿತರರು ಅಭಿನಂಧಿಸಿ ಪಟಾಕಿ ಸಿಡಿಸಿ ವಿಜಿಯೋತ್ಸವ ಆಚರಿಸಿದರು.
ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಕರುಣ ಶಾಸಕ ಡಿ.ರವಿಶಂಕರ್, ಎಂಡಿಸಿಸಿ ಬ್ಯಾಂಕಿನ ನಿರ್ದೇಶಕ ದೊಡ್ಡ ಸ್ವಾಮೇಗೌಡರ ಸಹಕಾರ ದೊಂದಿಗೆ ಸಂಘಕ್ಕೆ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲು ಶ್ರಮಿಸುವುದಾಗಿ ತಿಳಿಸಿದರು.
ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕರಾದ ವನಜಾಕ್ಷಿ,ಭಾಗ್ಯ, ಎಚ್.ಎಸ್.ಮಂಜು,ಜಾಕಿ ಪ್ರಕಾಶ್, ಸ್ವಾಮೀಗೌಡ, ಎಚ್.ಎಸ್.ಲೋಕೇಶ್, ಶಿವಣ್ಣ ಸಂಘದ ಕಾರ್ಯದರ್ಶಿ ಎಚ್.ಎಸ್.ಯೋಗೇಶ್ ಇದ್ದರು.



