Tuesday, November 4, 2025
Google search engine

Homeರಾಜ್ಯಸುದ್ದಿಜಾಲಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶ್ವರೂಪದರ್ಶನ

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶ್ವರೂಪದರ್ಶನ

ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ  ಬೆಳಗ್ಗೆ ವಿಶ್ವರೂಪದರ್ಶನ ಸೇವೆ ನಡೆಯಿತು.

ವಿಶ್ವಾವಸು ನಾಮ ಸಂವತ್ಸರದ ಕಾರ್ತಿಕ ಶುದ್ಧ  ಪಂಚಮಿಯಾದ ಭಾನುವಾರ ಪ್ರಾತಃಕಾಲ 4 ಗಂಟೆಗೆ  ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ತಿರುಮಲ ವೆಂಕಟರಮಣ ದೇವರ ದಿವ್ಯ ಸನ್ನಿಧಿಯಲ್ಲಿ ಲೋಕಕಲ್ಯಾಣಕ್ಕಾಗಿ 24ನೇ ವರ್ಷದ ವಿಶ್ವರೂಪದರ್ಶನ ಸೇವೆಯನ್ನು  ದಿವ್ಯಜ್ಯೋತಿ ಬೆಳಗಿಸಿ ಸಮಸ್ತ ಭಜಕ ವೃಂದದವರ ಸಹಕಾರದೊಂದಿಗೆ ನಡೆಸಲಾಯಿತು.

ಪ್ರಾತಃಕಾಲ 5 ಗಂಟೆಗೆ  ಕಾಕಡಾರತಿ, ಜಾಗರ ಪೂಜೆ ನಂತರ  ವಿಶೇಷಾಲಂಕಾರ ಶ್ರೀ  ದೇವರ ವಿಶೇಷ ವಿಶ್ವರೂಪದರ್ಶನ ಭಾಗ್ಯ, ಪ್ರಸಾದ  ವಿತರಣೆ ನಡೆಯಿತು. ಬೆಳಿಗ್ಗೆ 4.30 ರಿಂದ 7ರ ವರೆಗೆ ಸಂತ ವಾಣಿ ಭಜನಾ ಕಾರ್ಯಕ್ರಮದಲ್ಲಿ ಭಗವದ್ಭಕ್ತರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.

RELATED ARTICLES
- Advertisment -
Google search engine

Most Popular