Tuesday, November 4, 2025
Google search engine

Homeರಾಜ್ಯಸುದ್ದಿಜಾಲಮೂಢ ನಂಬಿಕೆಗೆ ಸಡ್ಡು ಹೊಡೆದ ಸಿಎಂ ಸಿದ್ದರಾಮಯ್ಯ.

ಮೂಢ ನಂಬಿಕೆಗೆ ಸಡ್ಡು ಹೊಡೆದ ಸಿಎಂ ಸಿದ್ದರಾಮಯ್ಯ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ
ರಾಜ್ಯದ ಮುಖ್ಯಮಂತ್ರಿ ಕಿತ್ತೂರು ಉತ್ಸವದ ಸಮಾರಂಭದಲ್ಲಿ ಭಾಗಿಯಾದರೆ ರಾಣಿ ಚನ್ನಮ್ಮ ತನ್ನ ಸಂಸ್ಥಾನದ ಅಧಿಕಾರ ಕಳೆದುಕೊಂಡ ಹಾಗೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಮೂಢನಂಬಿಕೆ” ಇದ್ದರೂ ಅದಕ್ಕೆ ಸಡ್ಡು ಹೊಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಬಾರಿಗೆ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದು ಕಿತ್ತೂರು ಕರ್ನಾಟಕದ ಜನರ ಅಭಿಮಾನಕ್ಕೆ ಕಾರಣವಾಗಿದೆ.
ಕಿತ್ತೂರಿಗೆ ಗುಜರಾತ್ ‌ಮುಖ್ಯಮಂತ್ರಿಯಾಗಿದ್ದ ನರೇಂದ್ರ ‌ಮೋದಿ ಅವರು ಆಗಮಿಸಿದ ಬಳಿಕ ದೇಶದ ಪ್ರಧಾನಿಯಾದರು. ಕಂದಾಯ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ರಾಜ್ಯದ ಮುಖ್ಯಮಂತ್ರಿಯಾದರು‌. ಮುಖ್ಯಮಂತ್ರಿಯಾಗಿ ಕಿತ್ತೂರಿಗೆ ಆಗಮಿಸಿದ್ದ ಎಚ್.ಡಿ.ದೇವೇಗೌಡ ಸಹ ದೇಶದ ಪ್ರಧಾನಿಯಾಗಿದ್ದರು. ಇಷ್ಟೇಲ್ಲ ಇತಿಹಾಸ ಇದ್ದರೂ ಆದರೆ ಕೆಲ ವರ್ಷಗಳ ಹಿಂದೆ ಕಿತ್ತೂರು ಉತ್ಸವಕ್ಕೆ ರಾಜಕಾರಣಿಗಳು ಆಗಮಿಸಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢ ನಂಬಿಕೆಯಿಂದ ಕಿತ್ತೂರುಗೆ ಬಾರದ ಮುಖ್ಯಮಂತ್ರಿಗಳು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಆಗಮಿಸಿದ್ದು ಬಿಟ್ಟರೆ ಸತತವಾಗಿ ಎರಡನೇ ಬಾರಿ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದು ಇತಿಹಾಸ ಸೃಷ್ಟಿಸಿದೆ.
ಉತ್ತರಾಧಿಕಾರಿ ವಿವಾದದ ಮಧ್ಯೆಯೂ ಮೌಢ್ಯಕ್ಕೆ ಸೆಡ್ಡು ಹೊಡೆದು ಎರಡನೇ ಬಾರಿ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ನಡೆಯುತ್ತಿರುವ 201ನೇ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಆಗಮಿಸಿದರು.
ಕಿತ್ತೂರು ಪಟ್ಟಣದಲ್ಲಿರುವ ಚನ್ನಮ್ಮನ ಪುತ್ಥಳಿಗೆ ಹಾರ ಹಾಕಲು ಮೇಲೆ ಹತ್ತಲಾಗದೇ ಶಾಸಕ ಬಾಬಾಸಾಹೇಬ್ ಪಾಟೀಲ್ ಕಡೆಯಿಂದ ಹಾರ ಹಾಕಿಸಿದ ಸಿಎಂ ಸಿದ್ದರಾಮಯ್ಯ ಚನ್ನಮ್ಮನ ಪುತ್ಥಳಿ ಕೆಳಗೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ವೇದಿಕೆಯತ್ತ ಹೊರಟರು. ಸಿಎಂಗೆ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಎನ್.ಎಚ್ ಕೊನರೆಡ್ಡಿ, ಆಸೀಫ್ ಸೇಠ್ ಸಾಥ್ ನೀಡಿದರು.

RELATED ARTICLES
- Advertisment -
Google search engine

Most Popular