Monday, November 3, 2025
Google search engine

Homeಕ್ರೀಡೆಭಾರತ–ಆಸ್ಟ್ರೇಲಿಯಾ ಟಿ20 ಸರಣಿ ಇಂದು ಚಾಲನೆ: 9 ಭಾರತೀಯ ಆಟಗಾರರಿಗೆ ಆಸೀಸ್ ಪಿಚ್‌ನಲ್ಲಿ ಚೊಚ್ಚಲ ಪ್ರದರ್ಶನದ...

ಭಾರತ–ಆಸ್ಟ್ರೇಲಿಯಾ ಟಿ20 ಸರಣಿ ಇಂದು ಚಾಲನೆ: 9 ಭಾರತೀಯ ಆಟಗಾರರಿಗೆ ಆಸೀಸ್ ಪಿಚ್‌ನಲ್ಲಿ ಚೊಚ್ಚಲ ಪ್ರದರ್ಶನದ ಅವಕಾಶ

ಇಂಡೊ-ಆಸೀಸ್ ನಡುವಣ ಟಿ20 ಸರಣಿಯು ಇಂದು ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳನ್ನಾಡಲಾಗುತ್ತದೆ. ಮೊದಲ ಮ್ಯಾಚ್ ಕ್ಯಾನ್​ಬೆರಾದಲ್ಲಿ ನಡೆದರೆ, ದ್ವಿತೀಯ ಪಂದ್ಯವು ಮೆಲ್ಬೋರ್ನ್​ನಲ್ಲಿ ಜರುಗಲಿದೆ. 3ನೇ ಪಂದ್ಯ ಹೋಬಾರ್ಟ್​ನಲ್ಲಿ ಆಡಲಾಗುತ್ತದೆ. ಹಾಗೆಯೇ ಕೊನೆಯ ಎರಡು ಪಂದ್ಯಗಳಿಗೆ ಕ್ಯಾರರಾ ಹಾಗೂ ಬ್ರಿಸ್ಬೇನ್ ಆತಿಥ್ಯವಹಿಸಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿಗೆ ವೇದಿಕೆ ಸಿದ್ಧವಾಗಿದೆ. ಇಂದು (ಅ.29) ಕ್ಯಾನ್​ಬೆರಾದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದ ಮೂಲಕ ಐದು ಮ್ಯಾಚ್​ಗಳ ಸರಣಿಗೆ ಚಾಲನೆ ದೊರೆಯಲಿದೆ. ಈ ಸರಣಿಯ ಮೂಲಕ 9 ಆಟಗಾರರು ಚೊಚ್ಚಲ ಬಾರಿ ಕಣಕ್ಕಿಳಿಯುವ ಅವಕಾಶವನ್ನು ಎದುರು ನೋಡುತ್ತಿದ್ದಾರೆ.

ಅಂದರೆ ಟೀಮ್ ಇಂಡಿಯಾದಲ್ಲಿರುವ 9 ಆಟಗಾರರು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಟಿ20 ಪಂದ್ಯವಾಡಲು ಸಜ್ಜಾಗಿದ್ದಾರೆ. ಇವರಲ್ಲಿ ಇಂದು ಯಾರಿಗೆ ಅವಕಾಶ ಸಿಗಲಿದೆ ಎಂಬುದೇ ಈಗ ಕುತೂಹಲ. ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಟಿ20 ಪಂದ್ಯವಾಡಲು ಅವಕಾಶವನ್ನು ಎದುರು ನೋಡುತ್ತಿರುವ ಆಟಗಾರರು ಯಾರೆಂದರೆ….

ಭಾರತ ಟಿ20 ತಂಡದ ಉಪನಾಯಕ ಶುಭ್​​ಮನ್ ಗಿಲ್​ ಇದೇ ಮೊದಲ ಬಾರಿಗೆ ಆಸೀಸ್ ಪಿಚ್​ನಲ್ಲಿ ಟಿ20 ಪಂದ್ಯವಾಡಲು ಸಜ್ಜಾಗಿದ್ದಾರೆ. ಹಾಗೆಯೇ ಭಾರತ ತಂಡದ ಸ್ಫೋಟಕ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ ಕೂಡ ಕಾಂಗರೂನಾಡಿನಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿಯಲಿದ್ದಾರೆ.

ಟೀಮ್ ಇಂಡಿಯಾದಲ್ಲಿ ಆಲ್​ರೌಂಡರ್​ಗಳಾಗಿ ಸ್ಥಾನ ಪಡೆದಿರುವ ನಿತೀಶ್ ಕುಮಾರ್ ರೆಡ್ಡಿ ಹಾಗೂ ಶಿವಂ ದುಬೆ ಕೂಡ ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಟಿ20 ಪಂದ್ಯವಾಡುವುದನ್ನು ಎದುರು ನೋಡುತ್ತಿದ್ದಾರೆ. ಅಂದರೆ ಕಳೆದ ಕೆಲ ವರ್ಷಗಳಿಂದ ಟೀಮ್ ಇಂಡಿಯಾ ಭಾಗವಾಗಿರುವ ದುಬೆ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹರ್ಷಿತ್ ರಾಣಾ.

ತಿಲಕ್ ವರ್ಮಾ, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಹಾಗೂ ಜಿತೇಶ್ ಶರ್ಮಾಗೂ ಇದು ಮೊದಲ ಆಸ್ಟ್ರೇಲಿಯಾ ಪ್ರವಾಸ. ಹೀಗಾಗಿ ಈ ನಾಲ್ವರೂ ಕೂಡ ಕಾಂಗರೂನಾಡಿನಲ್ಲಿ ಚೊಚ್ಚಲ ಟಿ20 ಪಂದ್ಯವಾಡುವ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಅದರಂತೆ ಈ ಬಾರಿಯ ಸರಣಿಯ ಮೂಲಕ ಯಾರೆಲ್ಲಾ ಆಸೀಸ್​ ಪಿಚ್​ನಲ್ಲಿ ತಮ್ಮ ಇನಿಂಗ್ಸ್ ಖಾತೆ ತೆರೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES
- Advertisment -
Google search engine

Most Popular