Monday, November 3, 2025
Google search engine

Homeಅಪರಾಧಪಿಡಿಓ ಕಿರುಕುಳಕ್ಕೆ ಪಂಚಾಯತ್‌ ಲೈಬ್ರೆರಿಯನ್ ವಿಷ ಸೇವಿಸಿ ಆತ್ಮಹತ್ಯೆ

ಪಿಡಿಓ ಕಿರುಕುಳಕ್ಕೆ ಪಂಚಾಯತ್‌ ಲೈಬ್ರೆರಿಯನ್ ವಿಷ ಸೇವಿಸಿ ಆತ್ಮಹತ್ಯೆ

ನೆಲಮಂಗಲ : ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಪಂಚಾಯತ್‌ ಲೈಬ್ರೆರಿಯನ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಳಲುಘಟ್ಟ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಗ್ರಾಮ ಪಂಚಾಯತ್‌ ಲೈಬ್ರೆರಿಯನ್ ಆಗಿದ್ದ ರಾಮಚಂದ್ರಯ್ಯ ಆತ್ಮಹತ್ಯೆಗೆ ಶರಣಾದ ವ್ಯಕ್ತಿ, ಕಳೆದ 25 ವರ್ಷದಿಂದ ಅರೆಕಾಲಿಕ ಗ್ರಂಥಾಲಯ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತಿ ಪಿಡಿಓ ಗೀತಾಮಣಿ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ಕಳೆದ ಮೂರು ತಿಂಗಳಿಂದ ಸಂಬಳ ನೀಡದೇ ಕಿರುಕುಳ ನೀಡುತ್ತಿದ್ದರು. ಜೊತೆಗೆ ಬಯೋಮೆಟ್ರಿಕ್ ಹಾಜರಾತಿ ಹಾಕದೇ, ಇಲ್ಲಸಲ್ಲದ ಕಾರಣ ಹೇಳಿ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ರಾಮಚಂದ್ರಯ್ಯ ಅವರು ವಿಷ ಸೇವನೆ ಮಾಡಿದ್ದಾರೆ.

ಒದ್ದಾಡುತ್ತಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತುಮಕೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮೃತ ರಾಮಚಂದ್ರಯ್ಯ ಅವರ ಅಣ್ಣನ ಮಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ದಾಖಲಿಸಿದ್ದು, ದೂರಿನನ್ವಯ ಪಿಡಿಓ ಗೀತಾಮಣಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

RELATED ARTICLES
- Advertisment -
Google search engine

Most Popular