Tuesday, November 4, 2025
Google search engine

Homeರಾಜ್ಯಸುದ್ದಿಜಾಲಸಮುದಾಯ ಬಲಿಷ್ಠವಾಗುವುದರ ಜೊತೆಗೆ ಆರ್ಥಿಕ ಕೊರತೆಯನ್ನು ನೀಗಿಸುವ ಪ್ರಯತ್ನವಾಗಲಿ: ಸಚಿವ ಸತೀಶ್ ಜಾರಕಿಹೊಳಿ

ಸಮುದಾಯ ಬಲಿಷ್ಠವಾಗುವುದರ ಜೊತೆಗೆ ಆರ್ಥಿಕ ಕೊರತೆಯನ್ನು ನೀಗಿಸುವ ಪ್ರಯತ್ನವಾಗಲಿ: ಸಚಿವ ಸತೀಶ್ ಜಾರಕಿಹೊಳಿ

ಹುಣಸೂರು: ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸಮುದಾಯ ಬಲಿಷ್ಠವಾಗುವುದರ ಜೊತೆಗೆ ಶಿಕ್ಷಣ ಪಡೆದು, ಆರ್ಥಿಕ ಕೊರತೆಯನ್ನು ನೀಗಿಸುವ ಪ್ರಯತ್ನವಾಗಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ತಾಲೂಕು ನಾಯಕರ ಸಂಘ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜನೆ ಮಾಡಿದ್ದ, ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮುದಾಯ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಕಲಿತ ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಮಹರ್ಷಿ ವಾಲ್ಮೀಕಿ ಅವರಲಿದ್ದ ಜ್ಞಾನ ಭಂಡಾರವನ್ನು ರಾಮಾಯಣ ಬರೆಯುವ ಮೂಲಕ ವಿಶ್ವಕ್ಕೆ ಹಂಚಿದ್ದಾರೆ ಎಂದರು.

ಆ ಮೂಲಕ ಸಮುದಾಯದ ಯುವಕ, ಯುವತಿಯರು ಶಿಕ್ಷಣಕ್ಕೆ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ರಾಮಾಯಣ ಕೃತಿಯನ್ನು ಓದುವ ನಿಟ್ಟಿನಲ್ಲಿ ತಮ್ಮ ಜ್ನಾನವನ್ನು ವಿಸ್ತರಿಸರಿಕೊಳ್ಳಿ. ಈ ಭಾಗದಲ್ಲಿ ದಿ.ಚಿಕ್ಕಮಾದು ಅವರು ಸಮುದಾಯದ ಪರ ಶ್ರಮಿಸಿದ್ದಾರೆ. ಮುಂದೆ ನಮಗೆ ಅಧಿಕಾರ ಸಿಕ್ಕಾಗ ನಿಮಗಾಗಿ ಕೆಲಸಮಾಡಲಿದ್ದೇವೆ. ಹಾಗೆ ಶಾಸಕ ಅನಿಲ್ ಚಿಕ್ಕಮಾದುಗೂ ಸಚಿವ ಸ್ಥಾನ ಸಿಗಲಿದೆ ಎಂದರು.

ಈ ಭಾಗದ ಯುವ ಶಾಸಕ ಜಿ.ಡಿ.ಹರೀಶ್ ಗೌಡ , ತಾಲೂಕು ಅಭಿವೃದ್ಧಿಗಾಗಿ ರಸ್ತೆಗಳ ಸಮಗ್ರ ಮನವಿ ಮಾಡಿದ್ದು, ಅವರ ಕಾಳಜಿ ನನಗೆ ಅರಿವಿದ್ದು, ರಸ್ತೆಗಳು ಹಳೇ ಸೇತುವೆ ಉನ್ನತಿಗೆ ನನ್ನ ಸಹಕಾರವಿದೆ.

ಸಚಿವ ಸತೀಶ್ ಜಾರಕಿಹೊಳಿ.

ಹೆಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಮಹರ್ಷಿ ವಾಲ್ಮೀಕಿ ರಾಮಾಯಣ ಅಂದು ಬರೆದಿರುವುದಕ್ಕೆ ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವುದು. ಅಂತ ಮಹಾನಾಯಕನ ಸ್ಮರಣೆ ನಿರಂತರವಿರಲಿ ಎಂದ ಅವರು ಇಂತಹ ಸಮುದಾಯಕ್ಕೆ ಹಾಲಿ ಶಾಸಕರಲ್ಲಿ ಒಂದು ಸಮುದಾಯ ಭವನಕ್ಕೆ ಒತ್ತಾಯಿಸಿದರು.

ನಾಯಕ ಸಮುದಾಯ ಸ್ವಾಭಿಮಾನಿಗಳಾಗಿದ್ದು, ನಮ್ಮ ಸಮಾಜದಲ್ಲಿ ಮಹರ್ಷಿ ವಾಲ್ಮೀಕಿ, ವೀರ ಮದಕರಿ, ಏಕಲವ್ಯ, ಇನ್ನೂ ಹಲವಾರು ಮಹನೀಯರು ತಮ್ಮ ಛಾಪನ್ನು ಮೂಡಿಸಿದ್ದಾರೆ. ಆ ನಿಟ್ಟಿನಲ್ಲಿ ನಮ್ಮ ತಂದೆ ಕೂಡ ಎರಡು ಜಿಲ್ಲೆಯ ಸಮುದಾಯದ ಪರ ರಾಜಕೀಯ ಹೋರಾಟ ಮಾಡಿದ್ದನ್ನು ಸ್ಮರಿಸಿದರು.

ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಈ ಭೂಮಿಗೆ ಆದರ್ಶ ಮರ್ಯಾದೆ ಪುರುಷ ರಾಮನ ಕೃತಿ, ರಾಮಾಯಣವನ್ನು ಸಮರ್ಥಿಸಿದ ಮಹರ್ಷಿ ವಾಲ್ಮೀಕಿ ಆದರ್ಶ ಮೌಲ್ಯಗಳು ಸರ್ವಕಾಲಿಕ ಸತ್ಯವಾಗಿದ್ದು, ಅಂತಹ ಸಮಾಜದ ಜತೆ ಪಕ್ಷಾತೀತವಾಗಿ ನಿಲ್ಲುವೆ ಎಂದರು.

ನಾಯಕ ಸಮುದಾಯ ಎಸ್ಟಿ ಸೇರ್ಪಡೆಯಲ್ಲಿ ದಿ.ಚಿಕ್ಕಮಾದು, ಉಗ್ರಪ್ಪ ಹೋರಾಟದ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಪ್ಪಾಜಿ ತಿಳಿಸಿದ ವಿಷಯವನ್ನು ನೆನಪಿಸಿದ ಅವರು ಹುಣಸೂರು ತಾಲೂಕು ಅಭಿವೃದ್ಧಿಗೆ ಸಚಿವರಾದ ಸತೀಶ್ ಜಾರಕಿಹೊಳಿಯವರು ಹನಗೋಡು, ಹಮ್ಮಿಗೆ ಗ್ರಾಮದ ಮುಖ್ಯ ರಸ್ತೆ ಮತ್ತು ಹಳೇ ಸೇತುವೆ ನವೀಕರಣಕ್ಕೆ ಸಹಕಾರ ನೀಡಿರುವುದನ್ನು ಪ್ರಶಂಶಿಸಿದರು.

ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಮಾತನಾಡಿ, ತಾಲೂಕಿನ ನಾಯಕ ಸಮಾಜ ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಮುಂದು ಬರಬೇಕಿದೆ. ಹಾಗೆ ನಿಮ್ಮ ಸಮುದಾಯದಲ್ಲಿ ಈ ಭಾಗದ ಪ್ರಮುಖ ಶಾಸಕರಾಗಿ ಅನಿಲ್ ಚಿಕ್ಕಮಾದು ಅವರಿದ್ದು ಅವರನ್ನು ಸಚಿವರನ್ನಾಗಿ ಆಯ್ಕೆ ಮಾಡಲು ಸತೀಶ್ ಅಣ್ಣನ ಸಹಕಾರದ ಅಗತ್ಯವಿದೆ ಮನವಿ ಮಾಡಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಬರೆದವರು ಒಬ್ಬರು ವಾಲ್ಮೀಕಿ. ಮತ್ತೊಬ್ಬರು ಬೆಸ್ತರಾದ ವೇದ ವ್ಯಾಸರು. ಇಬ್ಬರ ಚಿಂತನೆಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಸಮಾಜದ ಪರಿ ಕಲ್ಪನೆಯನ್ನು ವಿಶ್ವಕ್ಕೆ ಕೊಟ್ಟರು ಎಂದರು.

ಸಮಾಜ ಏಳಿಗೆಯಾಗಬೇಕಾದರೆ ಮೊದಲು ಅಕ್ಷರ ಕಲಿತು ಐಪಿಎಸ್,ಐಎಎಸ್, ಕೆಎಎಸ್ ಕೋರ್ಸ್ ಮೂಲಕ ಪದವಿ ಪಡೆದು. ಯುವಕರು ಹೆಚ್ಚು ರಾಜಕೀಯಕ್ಕೆ ಬರಬೇಕು. ರಾಜಕೀಯ ಜೀವನದಲ್ಲಿ ಮೌಲ್ಯಗಳು ಮುಖ್ಯವಾಗಿದ್ದು, ಪ್ರಾಮಾಣಿಕತೆ ಇನ್ನೂ ಮುಖ್ಯವಾಗಿದೆ. ಅದನ್ನು ವಾಲ್ಮೀಕಿ ಅಂದೇ ಸಮಾಜಕ್ಕೆ ತಿಳಿಸಿದ್ದರು ಎಂದರು.

ಮಹರ್ಷಿ ವಾಲ್ಮೀಕಿ ಮುಖ್ಯ ಭಾಷಣಕಾರ ಶಿವಮೊಗ್ಗದ ಕುವೆಂಪು ವಿಶ್ವ ವಿದ್ಯಾಲಯದ ಡಾ.ಪ್ರಶಾಂತ್ ನಾಯಕ್ ಮಾತನಾಡಿ, ಮಹರ್ಷಿ ವಾಲ್ಮೀಕಿ ವಿಶ್ವ ಸಂವಿಧಾನ ಬರೆದು. ಅಂದೇ, ಮೂರು ಸಂಸ್ಕೃತ ಕಲಿತು. ಪ್ರಚಾರಕತೆಯನ್ನು ರೂಪಿಸಿ, ಕೃತಿಯನ್ನು ರಚಿಸಿ ಸಮಾಜ ಕಣ್ಣು ತೆರೆಸಿದರು ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಜಗದ್ಗುರು ಶ್ರೀ ಶ್ರೀ ಶ್ರೀ ಪ್ರಸನ್ನಾನಂದಾ ಸ್ಬಾಮೀಜಿ ಮತ್ತು ಗಾವಡಗೆರೆ ಶ್ರೀ ಶ್ರೀ ನಟರಾಜ ಸ್ವಾಮಿಗಳು ವಹಿಸಿದ್ದರು.

ರಾಯಚೂರು ಸಂಸದ ಕುಮಾರ್ ನಾಯಕ್, ಐಪಿಎಸ್ ಅಧಿಕಾರಿ ರವಿಚನ್ನಣ್ಣನವರ್, ತಾಲೂಕು ನಾಯಕ ಸಂಘದ ಅಧ್ಯಕ್ಷ ಕೆ.ಎಸ್.ಅಣ್ಣಯ್ಯ ನಾಯಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್, ಜಿ.ಪಂ. ಮಾಜಿ ಸದಸ್ಯರಾದ ದೇವರಾಜ್, ಕಟ್ಟನಾಯಕ, ಕುನ್ನೇಗೌಡ, ನಾಗರಾಜ ಮಲ್ಲಾಡಿ, ತಹಶಿಲ್ದಾರ್ ಮಂಜನಾಥ್, ನಾಯಕ ಸಮುದಾಯದ ಪ್ರಧಾನ ಕಾರ್ಯದರ್ಶಿ ಎನ್.ರವಿ, ಮಯೂರ, ಶಿವಣ್ಣ, ಇನ್ನೂ ಹಲವಾರು ಸಮುದಾಯದ ನಾಯಕರು ಇದ್ದರು.

RELATED ARTICLES
- Advertisment -
Google search engine

Most Popular