Monday, November 3, 2025
Google search engine

Homeರಾಜ್ಯಸುದ್ದಿಜಾಲಮಲೆ ಮಹದೇಶ್ವರ ಸ್ವಾಮಿಯ 55ನೇ ವರ್ಷದ ಉತ್ಸವಕ್ಕೆ ಸಕಲ ಸಿದ್ಧತೆ : ಅಧ್ಯಕ್ಷ ಬೋಜರಾಜು

ಮಲೆ ಮಹದೇಶ್ವರ ಸ್ವಾಮಿಯ 55ನೇ ವರ್ಷದ ಉತ್ಸವಕ್ಕೆ ಸಕಲ ಸಿದ್ಧತೆ : ಅಧ್ಯಕ್ಷ ಬೋಜರಾಜು

ಉತ್ಸವಾಚರಣೆಯ ಆಹ್ವಾನ ಪತ್ರಿಕೆ, ದೇಣಿಗೆ ಸಂಗ್ರಹದ ರಶೀದಿ ಪುಸ್ತಕ ಬಿಡುಗಡೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಮಲೆ ಮಹದೇಶ್ವರ ಸ್ವಾಮಿಯ 55ನೇ ವರ್ಷದ ಉತ್ಸವಾಚರಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ಮಲೆ‌ ಮಹದೇಶ್ವರ ಸ್ವಾಮಿ ದೇವಸ್ಥಾನ ಮತ್ತು ಉತ್ಸವ ಸಮಿತಿ ಅಧ್ಯಕ್ಷ ಬೋಜರಾಜು ಹೇಳಿದರು.

ದೇವಾಲಯದ ಆವರಣದಲ್ಲಿ 2025ನೇ ವರ್ಷದ 55 ನೇ ಉತ್ಸವಾಚರಣೆಯ ಆಹ್ವಾನ ಪತ್ರಿಕೆ ಮತ್ತು ದೇಣಿಗೆ ಸಂಗ್ರಹದ ರಶೀದಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ನಮಗೆ ಸರ್ವರೂ ಸಹಕಾರ ನೀಡಬೇಕು ಎಂದು ಕೋರಿದರು.

ಭಕ್ತರ ಸಹಕಾರದಿಂದ ಕಳೆದ 54 ವರ್ಷಗಳಿಂದ ಮಲೆ ಮಹದೇಶ್ವರ ಸ್ವಾಮಿಯ ಉತ್ಸವ ಯಶಸ್ವಿಯಾಗಿ ನಡೆಯುತ್ತಿದ್ದು ದಿನದಿಂದ ದಿನಕ್ಕೆ ದೇವಾಲಯದ ಖ್ಯಾತಿ ಉತ್ತುಂಗಕ್ಕೇರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಡೆ ಕಾರ್ತಿಕ ಸೋಮವಾರ ದಂದು ನಡೆಯಲಿರುವ ಮಹದೇಶ್ವರ ಸ್ವಾಮಿಯ ಉತ್ಸವಾಚರಣೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿದೇಶೀಕೇಂದ್ರ ಸ್ವಾಮಿಜಿ ಸೇರಿದಂತೆ ಇತರ ಹರಗುರುಚರ ಮೂರ್ತಿಗಳು, ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರೊಂದಿಗೆ ಇತರ ಜನಪ್ರತಿನಿಧಿಗಳು ಹಾಗೂ ಅಪಾರ ಭಕ್ತ ವೃಂದದವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಹದೇಶ್ವರ ಸ್ವಾಮಿಯ ಉತ್ಸವಾಚರಣೆಗೆ ಸರ್ವರೂ ತಮ್ಮ ಅಗತ್ಯ ಸಲಹೆ, ಸಹಕಾರ ಮತ್ತು ಸಹಾಯ ನೀಡಬೇಕೆಂದು ಕೋರಿದ ಅಧ್ಯಕ್ಷರು ಅಂದಿನ ಆಚರಣೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಆಹ್ವಾನ ನೀಡಿದರು.

ಉತ್ಸವ ಸಮಿತಿ ಖಜಾಂಚಿ ಎ.ಎಸ್.ನಾಗರಾಜು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಮುಖಂಡರಾದ ಜತ್ತಿಪ್ರಕಾಶ್, ಶಂಕರ್, ಭದ್ರೇಶ, ಸಿದ್ದೇಶ್, ಮದೇಶ್, ಪೃಥ್ವಿರಾಜ್, ಗುರುಶಂಕರ್, ಮಂಜುನಾಥ್, ಸೋಮೇಶ್, ಅಜ್ಜು, ಶರತ್ ಬಾಬು, ಮುತ್ತುರಾಜ್ ಸೇರಿದಂತೆ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular