Monday, November 3, 2025
Google search engine

Homeರಾಜ್ಯಸುದ್ದಿಜಾಲಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದ ಅಂಗವಾಗಿ ಕೆ.ಆರ್.ನಗರದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ

ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದ ಅಂಗವಾಗಿ ಕೆ.ಆರ್.ನಗರದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಭಾರತ ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ಒಂದುಗೂಡಿಸಿದಂತಹ ಮಹಾನ್ ವ್ಯಕ್ತಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹುಟ್ಟು ಹಬ್ಬದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನವಾಗಿ ಆಚರಣೆ ಮಾಡಲಾಗುತ್ತದೆ ಎಂದು ಕೆ. ಆರ್. ನಗರ ಪೊಲೀಸ್ ಠಾಣೆಯ ವೃಕ್ತ ನಿರೀಕ್ಷಕ ಶಿವಪ್ರಕಾಶ್ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಅವರು ಭಾರತದ ಸ್ವಾತಂತ್ರ್ಯದ ನಂತರ ಏಕೀಕರಣದ ಸಂದರ್ಭದಲ್ಲಿ ಇಡಿ ದೇಶ ಹರಿದು ಹಂಚಿಹೋಗಿದ್ದ ದೇಶವನ್ನು ಒಂದುಗೂಡಿಸಿ ಐಕ್ಯತೆ ಹಾಗೂ ಸಮಗ್ರತೆಯನ್ನು ಕಾಪಾಡಿಲು ಶ್ರಮಿಸಿದಂತಹ ಮಹಾನ್ ಚೇತನ ಸರ್ದಾರ್ ವಲ್ಲಬಾಯ್ ಪಟೇಲ್ ಎಂದು ವಿವರಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದ ಅಂಗವಾಗಿ ಏಕತೆಗಾಗಿ ಓಟವೆಂಬ ಪ್ರತಿಜ್ಞಾವಿದಿಯನ್ನು ಭಾರತದ ಪ್ರತಿಯೊಬ್ಬ ನಾಗರಿಕರು ಕೊಡ ಸ್ವೀಕರಿಸಬೇಕು, ಅವರ ಜನುಮದಿನದ ಅಂಗವಾಗಿ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕು ಎಂದು ಕರೆ ನೀಡಿ ಪಟ್ಟಣದ ಹಾಸನ-ಮೈಸೂರು ಮುಖ್ಯ ರಸ್ತೆ ಸೇರಿದಂತೆ ವಿವಿಧ ಬೀದಿಗಳಲ್ಲಿ ಏಕತಾ ಓಟವನ್ನು ಮಾಡಲಾಯಿತು ಎಂದು ತಿಳಿಸಿದರು.

ಬಳಿಕ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್, ಮುಖ್ಯ ಪೇದೆಗಳು, ಪೇದೆಗಳು ಸೇರಿದಂತೆ ಸಿಬ್ಬಂದಿಗಳು ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಜನುಮ ದಿನದ ಅಂಗವಾಗಿ ಹಾಗೂ ರಾಷ್ಟ್ರೀಯ ಏಕತಾ ದಿವಸ್ ದಿನಾಚರಣೆ ಪ್ರಯುಕ್ತ ಪಟ್ಟಣದ ವಿ.ವಿ ರಸ್ತೆ,ಮೂಲಕ ಗರುಡುಗಂಭ ವೃತ್ತ, ಪುರಸಭೆ ವೃತ್ತದಿಂದ ಹಾಸನ- ಮೈಸೂರು ಮಾರ್ಗವಾಗಿ ಏತಕತೆಗಾಗಿ ನಾಲ್ನಡಿಗೆ ಓಟ ಜಾಥಾ ಮೂಲಕ ವಿಶಿಷ್ಠವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಿಎಸ್ಐಗಳಾದ ಲಿಂಗರಾಜು, ಸ್ವಾಮಿ ಗೌಡ, ಎ.ಎಸ್.ಐ. ಮಹೇಶ್, ಮುಖ್ಯಪೇದೆಗಳಾದ ಅನಿಲ್, ಪರಶುರಾಮೇಗೌಡ, ಅನೀಲ್ ಕುಮಾರ್, ಕುಮಾರ್, ಗುರು ಪ್ರಸಾದ್, ಪ್ರಕಾಶ್, ಪೇದೆಗಳಾದ ಅಶೋಕ್, ಸ್ವಾಮೀಗೌಡ, ಎಚ್.ಕೆ ಮಧುಸೂದನ್, ಮುಕುಂದ, ಕೃಷ್ಣ ಅರುಣ್ ಕುಮಾರ್, ರೂಪೇಶ್, ಗಿರೀಶ್, ಚೇತನ್, ಆನಂದ್, ಮಹಮ್ಮದ್ ಅಲಿ, ಹರೀಶ್, ಮಹಿಳಾ ಪೇದೆಗಳಾದ ಮಹದೇವಮ್ಮ, ಸುನೀತ, ಚಾಲಕರಾದ ಅಹಮದ್ ಅಲಿ,ಸಿಬ್ಬಂದಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular