Monday, November 3, 2025
Google search engine

Homeರಾಜ್ಯಸುದ್ದಿಜಾಲಆಗ ಹತ್ತು ಜನ.. ಈಗ ಲಕ್ಷ ಲಕ್ಷ…!

ಆಗ ಹತ್ತು ಜನ.. ಈಗ ಲಕ್ಷ ಲಕ್ಷ…!

ವರದಿ :ಸ್ಟೀಫನ್ ಜೇಮ್ಸ್.

ಗಡಿನಾಡ ರಾಜ್ಯೋತ್ಸವದ ಪರಿವರ್ತನೆ
ಒಂದಾನೊಂದು ಕಾಲದಲ್ಲಿ ಗಡಿನಾಡ ಬೆಳಗಾವಿಯಲ್ಲಿ ರಾಜ್ಯೋತ್ಸವ ಎಂದರೆ ಚನ್ನಮ್ಮ ವೃತ್ತಕ್ಕೆ ಹತ್ತು ಜನ ಬಂದು ಹೂವಿನ ಹಾರ ಹಾಕಿ “ಜಯ ಕನಾರ್‌ಟಕ ಮಾತೆ” ಎಂದು ಕೂಗಿದರೆ ಮುಗೀತು, ಅಂದರೆ ರಾಜ್ಯೋತ್ಸವದ ಹಿರಿಮೆ ಅಷ್ಟಕ್ಕಷ್ಟೇ ಸೀಮಿತವಾಗಿತ್ತು.
ನಂತರ ಸಕಾರ್‌ರದ ನಾಮಕಾವಾಸ್ತೆಯ ಮೆರವಣಿಗೆಗಳು, ಬಣ್ಣದ ಬಸ್ಸಳು, ಲಾರಿಗಳು, ಎತ್ತಿನ ಜೋಡಿಗಳು ಸಾಲಾಗಿ ಹೊರಟರೆ ಮೆರವಣಿಗೆ ಮುಗಿದಂತೆ. ಆದರೆ ಅದರ ನಡುವೆ ಬೆಳಗಾವಿಯ ಕನ್ನಡಿಗನ ಹೃದಯದಲ್ಲಿ ಒಂದು ಚುರುಕು ಬೆಳೆದಿತ್ತು. “ನಾವು ಕನ್ನಡಿಗರು” ಎನ್ನುವ ಧ್ವನಿ ನಿಧಾನವಾಗಿ ಕಣ್ಮರೆಯಾಗದೆ ಬೆಳಗುತ್ತಲೇ ಹೋಯಿತು. ನಾಡದ್ರೋಹಿಗಳ ಪುಂಡಾಟಕ್ಕೆ ಬ್ರೇಕ್
ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟಿಕೆ, ಗಡಿ ವಿವಾದ, ಕಾಲು ಕೆದರಿ ಜಗಳ ತೆಗೆಯುವುದು, ಕಲ್ಲು ತೂರಾಟ, ಕನ್ನಡ ನಾಮಫಲಕ ಧ್ವಂಸ ಈ ಎಲ್ಲವೂ ಆಗ ಸಾಮಾನ್ಯವಗಿ ಬಿಟ್ಟಿತ್ತು,

ಆದರೆ ಅದಕ್ಕೆ ಎದುರಾಗಿ ಆಗ ನಿಂತದ್ದು ಟಿ.ಎ. ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆ (ಕರವೇ).! ನಾರಾಯಣಗೌಡ ಅವರ ನೇತೃತ್ವದಲ್ಲಿ ಬೆಳಗಾವಿಯಲಿ ಕನ್ನಡ ಸೇನಾನಿಗಳು ಹುಟ್ಟಿಕೊಂಡರು. ಈ ಕಾರಣದಿಂದ ಎಂಇಎಸೆ ಏಟಿಗೆ ಎದಿರೇಟು ಕೊಡುವ ಕೆಲಸವನ್ನು ಕರವೇ ಸೇನಾನಿಗಳು ಮಾಡಿದರು, ಈಗಲೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರಾದ ದೀಪಕ ಗುಡುಗನಟ್ಟಿ, ಮಹಾದೇವ ತಳವಾರ, ಸುರೇಶ ಗವನ್ನವರ, ಕರೆಪ್ಪ ಕೊಚ್ಚರಿಗಿ, ಪ್ರಕಾಶ ಲಮಾಣಿ, ರಮೇಶ ಯರಗಣ್ಣವರ, ವಿನಾಯಕ ಬೋವಿ ಮುಂತಾದವರು ತಮ್ಮ ಮೇಲೆ ಹತ್ತಾರು ಕೇಸ್ ಹಾಕಿಸಿಕೊಂಡರೂ ಕೂಡ ಅಂಜದೇ ಕನ್ನಡ ಹೋರಾಟದಲ್ಲಿ ಸಕ್ರೀಯವಾಗಿದ್ದಾರೆ. ಇದೇ ಕಾರಣದಿಂದ ಸಕಾರ್‌ರ ಕೂಡ ಕನ್ನಡಿಗರ ಹೋರಾಟ ಅಂದರೆ ಹತ್ತು ಬಾರಿ ವಿಚಾರ ಮಾಡಿ ಹೆಜ್ಜೆ ಇಡುವ ಪರಿಸ್ಥಿತಿ ಬಂದೊದಗಿದೆ. ಗಮನಿಸಬೇಕಾದ ಸಂಗತಿ ಎಂದರೆ, ಆ ಕಾಲದಲ್ಲಿ ಕೆಲ ಸ್ಥಳೀಯ ರಾಜಕಾರಣಿಗಳು ಬೆಂಗಳೂರಿನ ಸಂಘಟನೆಗಳ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು, “ಇಲ್ಲಿ ನಮ್ಮಲ್ಲಿಯೂ ಕನ್ನಡ ಸಂಘಟನೆಗಳಿವೆ, ಬೆಂಗಳೂರಿನವರು ಏಕೆ?” ಎಂದು ಪ್ರಶ್ನೆ ಮಾಡುತ್ತಿದ್ದರು, ಆದರೆ ಬೆಳಗಾವಿ ಕನ್ನಡಿಗರಿಗೆ ಶಕ್ತಿ ತುಂಬುವ ಕೆಲಸವನ್ನು ಬೆಂಗಳೂರಿನಕನ್ನಡ ಪರ ಸಂಘಟನೆಗಳು ಮಾಡಿದವು ಎನ್ನುವುದರಲ್ಲಿ ಎರಡು ಮಾತಿಲ್ಲ.

ಸಿಡಿಮದ್ದು ಪ್ರದರ್ಶನ..
ವಿಶೇಷವಾಗಿ ಈ ಬಾರಿ ಮಧ್ಯರಾತ್ರಿ 12 ರ ಹೊತ್ತಿಗೆ ಸಿಡಿಮದ್ದು ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಅದನ್ನು ನೋಡಲು ಸಾವಿರಾರು ಜನ ಚನ್ನಮ್ಮ ವೃತ್ತದಲ್ಲಿ ಸೇರಿದ್ದಾರೆ.

RELATED ARTICLES
- Advertisment -
Google search engine

Most Popular