Monday, November 3, 2025
Google search engine

Homeರಾಜ್ಯಸುದ್ದಿಜಾಲಜಿಲ್ಲಾಡಳಿತಕ್ಕೆ ಸಡ್ಡು ಹೊಡೆದ ಪುಂಡ ಎಂಇಎಸ್.

ಜಿಲ್ಲಾಡಳಿತಕ್ಕೆ ಸಡ್ಡು ಹೊಡೆದ ಪುಂಡ ಎಂಇಎಸ್.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ
ಬೆಳಗಾವಿಯಲ್ಲಿ ರಾಜ್ಯೋತ್ಸವದ ದಿನಂದ ಪುಂಡ ಎಂಇಎಸ್ ಗೆ ಕರಾಳ ದಿನಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನುಮತಿ ನೀಡದಿದ್ದರೂ ಶನಿವಾರ ಪುಂಡ ಎಂಇಎಸ್ ಬೆರಳಣಿಕೆಯಷ್ಟು ಜನ ಪುಂಡ ಎಂಇಎಸ್ ಮುಖಂಡರು ಸೇರಿ ಕರಾಳ ದಿನಾಚರಣೆ ಆಚರಿಸುತ್ತಿರುವುದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.
ಬೆಳಗಾವಿಯ ಚನ್ನಮ್ಮ ವೃತ್ತ ಸೇರಿದಂತೆ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಬ್ಬ ಸಂಭ್ರಮದಿಂದ ಆಚರಿಸುತ್ತಿದ್ದರೇ, ಇತ್ತ ಪುಂಡ ಎಂಇಎಸ್ ಬೆಳಗಾವಿಯ ಧರ್ಮವೀರ ಸಂಭಾಜಿ ಮೈದಾನದಲ್ಲಿ ಸೇರಿ ಅಲ್ಲಿಂದ ನಾಡದ್ರೋಹಿಗಳಿಂದ ಕರಾಳ ದಿನಾಚರಣೆಗೆ ಕಪ್ಪು ಬಟ್ಟೆ ಧರಿಸಿ ರಾಜ್ಯ ಸರಕಾರದ ವಿರುದ್ಧ ‌ಘೋಷಣೆ ಕೂಗುತ್ತಿದ್ದಾರೆ.
ಧರ್ಮವೀರ ಸಂಬಾಜಿ ಮೈದಾನದಿಂದ, ಬಾತಕಾಂಡೆ ನಗರ,ಪೋರ್ಟ್ ರೋಡ್,ಪಾಟೀಲ ಗಲ್ಲಿ ಸೇರಿ ಮರಾಠ ಮಂಗಲ ಕಾರ್ಯಾಲಯಕ್ಕೆ ಹೋಗಿ ಮುಕ್ತಾಯವಾಗಲಿದೆ.
ಮಾಧವ್ ರೋಡ್, ಎಸ್ ಬಿ ಎಮ್ ರೋಡ್ ಹೇಮು ಕಲ್ಯಾಣಿ ಚೌಕ್,ಮುಜಾವರ್ ವಲ್ಲಿ ಶನಿಮಂದಿರ ಬಳಸಿಕೊಂಡು ಬರುತ್ತಿರುವ ರ್ಯಾಲಿಯಲ್ಲಿ ಬೀದರ್ ಬಾಲ್ಕಿ ನಿಪ್ಪಾಣಿ ಬೆಳಗಾವಿ ನಮ್ಮದೆ ಎಂದು ಘೋಷಣೆ ಕೂಗುತ್ತಿರುವ ಪುಂಡರು ರಾಜ್ಯ ಸರಕಾರದ ವಿರುದ್ಧ ದಿಕ್ಕಾರ ಹಾಕಿ ಮಹಾರಾಷ್ಟ್ರಕ್ಕೆ ಜೈ ಕಾರ ಹಾಕುತ್ತಿದ್ದಾರೆ.
ಜಿಲ್ಲಾಡಳಿತದ ಪರವಾನಗಿ ಇಲ್ಲದಿದ್ದರೂ ಸಹ ಸಡ್ಡು ಹೊಡೆದಿರುವ ಪುಂಡ ಎಂಇಎಸ್ ಮಹಾರಾಷ್ಟ್ರದಿಂದ ನಮ್ಮ ಸೈಕಲ್ ರ್ಯಾಲಿಗೆ ನಾಯಕರು ಆಗಮಿಸುತ್ತಾರೆ. ಅವರನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎನ್ನುವ ಪುಂಡಾಟ ಮೆರೆದು ಕನ್ನಡಿಗರನ್ನು ಕೆಣುಕುವಂತೆ ಮಾಡಿದೆ.

RELATED ARTICLES
- Advertisment -
Google search engine

Most Popular