ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತರಾದ ಸಿ.ಬಿ.ಬೀರೇಗೌಡ ಮತ್ತು ಉಪಾಧ್ಯಕ್ಷರಾಗಿ ಸಿ.ಆರ್.ರವೀಶ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಬಿ.ಬೀರೇಗೌಡ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಆರ್.ರವೀಶ್ ಅವರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಸಿಡಿಒ ಎಸ್.ರವಿ ಅವರು ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ನಂತರ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಚಿಬುಕಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್, ಮಾಜಿ ಅಧ್ಯಕ್ಷ ವೆಂಕಟೇಶ್, ನಿರ್ದೇಶಕ ಸಿ.ಎ.ಗಣೇಶ್, ಸಿ.ಎಸ್.ಶಿವರಾಜ್, ಡೈರಿ ಮಾಜಿ ಅಧ್ಯಕ್ಷ ಸಿ.ಟಿ.ಪಾಪಣ್ಣ, ಗ್ರಾ.ಪಂ.ಅಧ್ಯಕ್ಷ ಮಾದೇವ, ಮುಖಂಡರಾದ.ಸಿ.ಎಂ.ಮಂಜು, ರಾಮೇಗೌಡ, ಚಿಕ್ಕೇಗೌಡ, ಕರಿಯಯ್ಯ, ಸೋಮಯ್ಯ, ಅಶೋಕ್ , ಉದ್ಯಮಿ ನಾಗರಘಟ್ಟ ಮಹದೇವ್ , ಮತ್ತಿತರರು ಅಭಿನಂದಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕ ಸಿ.ಜೆ.ವೆಂಕಟೇಶ್, ಸಿ.ಕೆ.ಜವರಯ್ಯ, ಸಿ.ಪಿ.ಸೋಮಶೇಖರ್, ಸಿ.ಜೆ.ಶಿವರಾಜ, ಪ್ರೇಮಮ್ಮ, ಅನುಪಮ, ಸಿ.ಟಿ.ಶಿವರಾಜ್, ಸಿ.ಆರ್.ಮೋಹನ್ ಕುಮಾರ್, ಸಂಘದ ಮಾರ್ಗವಿಸ್ತರಾಧಿಕಾರಿ ನೇಮಥಾ ಮಾಕಾನಿ, ಸಂಘದ ಕಾರ್ಯದರ್ಶಿ ಸಿ.ಕೆ.ಲೋಕೇಶ್, ಹಾಲುಪರೀಕ್ಷ ಸಿ.ಎಂ.ಮಂಜೇಶ್, ಸಿಬ್ಬಂದಿ ಸಿ.ಜೆ.ಜಗದೀಶ್ ಇದ್ದರು.



                                    