Tuesday, November 4, 2025
Google search engine

Homeಸ್ಥಳೀಯಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಸಾಮೂಹಿಕ ತುಳಸಿ ಪೂಜೆ

ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಸಾಮೂಹಿಕ ತುಳಸಿ ಪೂಜೆ

ಮೈಸೂರು: ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮೈಸೂರು ಧರ್ಮ ಪ್ರಸಾರ ವಿಭಾಗದಿಂದ ಉತ್ಥಾನ ದ್ವಾದಶಿ ಹಾಗೂ ಕಾರ್ತಿಕ ಸೋಮವಾರದ ಪ್ರಯುಕ್ತ ಸಾಮೂಹಿಕ ತುಳಸಿ ಪೂಜೆ ನೆರವೇರಿಸಲಾಯಿತು.

ಮೂಕಾಂಬಿಕಾ ಸತ್ಸಂಗದಿಂದ ತುಳಸಿ ದಾಮೋದರ ಸ್ತೋತ್ರ ಹಾಗೂ ಕಾರ್ತಿಕ ಸೋಮವಾರದ ಪ್ರಯುಕ್ತ ಶಿವ ಪಂಚಾಕ್ಷರಿ ಸ್ತೋತ್ರ, ಕಲ್ಯಾಣ ವೃಷ್ಟಿ ಸ್ತವದ ಪಾರಾಯಣ ಮಾಡಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸತ್ಸಂಗ ಪ್ರಮುಖರಾದ ಶ್ರೀಯುತ ಮಹಾಬಲೇಶ್ವರ ಹೆಗಡೆ ಕಾರ್ತಿಕ ಮಾಸದ ವಿಶೇಷಗಳು ಆ ಮಾಸದಲ್ಲಿ ಬರುವ ಹಬ್ಬಗಳ ಬಗ್ಗೆ ವಿವರಣೆ ನೀಡಿದರು. ತುಳಸಿಯ ಪೂಜೆ ನಮ್ಮ ಸಂಪ್ರದಾಯ ಅದನ್ನು ಸಾಮೂಹಿಕವಾಗಿ ಮಹಿಳೆಯರು ವಿವಿಧ ಭಜನೆ ಹಾಡುಗಳು ಹಾಗೂ ಸ್ತೋತ್ರಗಳ ಪಾರಾಯಣ ಮಾಡಿ ಆಚರಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸವನ್ನು ಮೂಕಾಂಬಿಕಾ ಸತ್ಸಂಗ ಬಳಗ ಮಾಡುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮೈಸೂರು ಧರ್ಮ ಪ್ರಸಾರ ಪ್ರಮುಖ್ ಪುನೀತ್ ಜಿ ನರಕಾಸುರ, ಬಲಿ ಚಕ್ರವರ್ತಿಗಳ ಪೌರಾಣಿಕ ಹಿನ್ನೆಲೆಯನ್ನು ತಿಳಿಸಿದರು.

ಮೂಕಾಂಬಿಕಾ ಸತ್ಸಂಗದ ಅಧ್ಯಕ್ಷರಾದ ಶ್ರೀಮತಿ ಶುಭಾ ಅರುಣ್ ಮಾತನಾಡಿ ತುಳಸಿ ಪೂಜೆ ಮಹಿಳೆಯರಿಗೆ ವಿಶೇಷವಾದ ನಂಬಿಕೆ ಮತ್ತು ಭಕ್ತಿ, ತುಳಸಿ ವಿವಾಹವಾದ ದಿನವನ್ನು ನಾವು ಉತ್ಥಾನ ದ್ವಾದಶಿ ಎಂದು ಕರೆಯುತ್ತಾರೆ, ಹಿಂದೆ ತುಳಸಿ ಹಬ್ಬವಾದ ನಂತರ ನಮ್ಮೆಲ್ಲರ ಮನೆಗಳಲ್ಲಿ ಶುಭ ಕಾರ್ಯಗಳಾದ ಗೃಹ ಪ್ರವೇಶ, ವಿವಾಹ ಮುಂತಾದ ಕಾರ್ಯಕ್ರಮಗಳು ನೆಡೆಯುತ್ತಿದ್ದೆವು. ಲೋಕಕಲ್ಯಾಣಕ್ಕಾಗಿ ನಮ್ಮ ಸತ್ಸಂಗದಿಂದ ಈ ಸಾಮೂಹಿಕ ತುಳಸಿ ಪೂಜೆಯನ್ನು ನೆರವೇರಿಸಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ. ಆರ್. ಗಣೇಶ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್, ಸತ್ಸಂಗ ಪ್ರಮುಖರಾದ ರಾಧಾ ಲಕ್ಷ್ಮಣರಾಜು, ಜಯಶ್ರೀ, ಸುಮತಿ ಸುಬ್ರಹ್ಮಣ್ಯ, ವಿಜಯೇಂದ್ರ, ಮಹೇಶ್, ಶುಭಾ ಅರುಣ್ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಗೂ ಮೂಕಾಂಬಿಕಾ ಸತ್ಸಂಗ ಬಳಗದ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular