Wednesday, November 5, 2025
Google search engine

Homeರಾಜ್ಯನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿನಲ್ಲಿ ಶಾಸಕ ಹೆಚ್.ವೈ.ಮೇಟಿ ಅಂತ್ಯಕ್ರಿಯೆ

ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿನಲ್ಲಿ ಶಾಸಕ ಹೆಚ್.ವೈ.ಮೇಟಿ ಅಂತ್ಯಕ್ರಿಯೆ

ಬೆಂಗಳೂರು: ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ  ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಹೆಚ್.ವೈ. ಮೇಟಿ (79) ಅವರ ಅಂತ್ಯಕ್ರಿಯೆ ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಿನಲ್ಲಿ ನಡೆಯಲಿದೆ

ನಾಳೆ ಹುಟ್ಟೂರಿನಲ್ಲಿ ಬಾಗಲಕೋಟೆಯಲ್ಲಿ ಲಿಂಗಾಯತ ಸಂಪ್ರದಾಯದಂತೆ ಸಕಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅನಾರೋಗ್ಯದಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ  ಎಚ್ ವೈ ಮೇಟಿ ದಾಖಲಾಗಿದ್ದರು, ಆದರೆ ಚಿಕಿತ್ಸೆಫಲಕಾರಿಯಾಗದೆ ಶಾಸಕ ಎಚ್ ವೈ ಮೇಟಿ ನಿಧನರಾಗಿದ್ದಾರೆ.

ಹೆಚ್ ವೈ ಮೇಟಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು ಇಂದು ರಾತ್ರಿ 8 ಗಂಟೆಗೆ ಬಾಗಲಕೋಟೆಗೆ  ಹೆಚ್ ವೈ ಮೇಟಿ ಪಾರ್ಥೀವ ಶರೀರವನ್ನ ರವಾನೆ ಮಾಡಲಾಗುತ್ತದೆ.  ರಾತ್ರಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಬೆಳಿಗ್ಗೆ ತಿಮ್ಮಾಪುರಕ್ಕೆ ಪಾರ್ಥೀವ ಶರೀರ ಶಿಫ್ಟ್ ಆಗಲಿದ್ದು ಅಂತ್ಯಕ್ರಿಯೆ ನೆರವೇರಲಿದೆ.

2013ರ ವಿಧಾನಸಭೆ ಗೆಲುವು ಸಾಧಿಸಿದ್ದ ಹೆಚ್ ವೈ ಮೇಟಿ  ಸಿಎಂ ಸಿದ್ದರಾಮಯ್ಯ  ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.  2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು 2023ರಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.

RELATED ARTICLES
- Advertisment -
Google search engine

Most Popular