Wednesday, November 5, 2025
Google search engine

Homeಸ್ಥಳೀಯಅಂಕಪಟ್ಟಿಗಾಗಿ ರಸ್ತೆಯಲ್ಲಿ ಮಲಗಿ ವಿದ್ಯಾರ್ಥಿನಿ ಪ್ರತಿಭಟನೆ

ಅಂಕಪಟ್ಟಿಗಾಗಿ ರಸ್ತೆಯಲ್ಲಿ ಮಲಗಿ ವಿದ್ಯಾರ್ಥಿನಿ ಪ್ರತಿಭಟನೆ

ಮೈಸೂರು: ಅಂಕಪಟ್ಟಿ ನೀಡುವಂತೆ ಒತ್ತಾಯಿಸಿದ ವಿದ್ಯಾರ್ಥಿನಿಯೊಬ್ಬರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು ವಿವಿ (ಕಾಫ್ರರ್ಟ್ ಭವನದ) ಆಡಳಿತ ಸೌಧದ ಎದುರಿನ ರಸ್ತೆಯಲ್ಲಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿ ಪ್ರಭಾ ಡಿ.ಸಿ. ಪ್ರತಿಭಟನೆ ನಡೆಸಿದ್ದಾರೆ.

ಬಿ.ಇಡಿ ಪ್ರವೇಶಕ್ಕೆ ಎಸ್‌ಎಸ್‌ಎಲ್‌ಸಿ ಮತ್ತು ಪದವಿ ಅಂಕಪಟ್ಟಿಗಳನ್ನು ನೀಡುವಂತೆ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ಆರ್ಥಿಕ ಸಮಸ್ಯೆ ಇರುವುದರಿಂದ ನಕಲಿ ಅಂಕ ಪಟ್ಟಿ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರವೇಶಾತಿ ಪಡೆದ ಬಳಿಕ ಮತ್ತೆ ಅಂಕ ಪಟ್ಟಿಗಳನ್ನು ಮರಳಿ ನೀಡುವುದಾಗಿ ಕೋರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ವಿದ್ಯಾರ್ಥಿನಿಯು ಅಂಕ ಪಟ್ಟಿ ಕೊಡಬೇಕಾದರೆ ಲಂಚ ಕೊಡುವಂತೆ ಕೇಳುತ್ತಿರುವುದಾಗಿ ಅಪಾದಿಸಿದ್ದಾರೆ. ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದರಿಂದ ಸಂಚಾರಕ್ಕೆ ಕೆಲ ಕಾಲ ಅಡಚಣೆಯಾಗಿತ್ತು.

RELATED ARTICLES
- Advertisment -
Google search engine

Most Popular