Wednesday, November 5, 2025
Google search engine

Homeರಾಜ್ಯಸುದ್ದಿಜಾಲಸಮಾಜ ಸಾಧನೆಯನ್ನು ಮಾತ್ರ ಗುರುತಿಸುತ್ತದೆ: ತಾ.ಪಂ. ಕಾರ್ಯನಿರ್ವಾಣಾಧಿಕಾರಿ ಹೊಂಗಯ್ಯ

ಸಮಾಜ ಸಾಧನೆಯನ್ನು ಮಾತ್ರ ಗುರುತಿಸುತ್ತದೆ: ತಾ.ಪಂ. ಕಾರ್ಯನಿರ್ವಾಣಾಧಿಕಾರಿ ಹೊಂಗಯ್ಯ

ಹುಣಸೂರು : ಸಾವು ನೋವುಗಳು ಒಳ್ಳೆಯವರು ಕೆಟ್ಟವರು ಅಂತ ಯಾರನ್ನು ಬಿಟ್ಟಿಲ್ಲ ಆದರೆ ಇರುವ ನಡುವೆ ನಮ್ಮ ಸಮಾಜ ಸಾಧನೆಯನ್ನು ಮಾತ್ರ ಗುರುತಿಸುತ್ತದೆ ಎಂದು ತಾ.ಪಂ. ಕಾರ್ಯನಿರ್ವಾಣಾಧಿಕಾರಿ ಹೊಂಗಯ್ಯ ತಿಳಿಸಿದರು.

ನಗರದ ತಾ.ಪಂ. ಸಭಾಂಗಣದಲ್ಲಿ ಇತ್ತೀಚಿಗೆ ಆಕಸ್ಮಿಕ ಅಪಘಾತದಲ್ಲಿ ಮೃತರಾದ ಎಸ್.ಎಂ.ಚಂದ್ರಶೇಖರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೃತ ಚಂದ್ರು ಅವರು ಹಾಲಿ ಗ್ರಾಮ ಪಂ ಸದಸ್ಯರು ಮಾಜಿ ಅಧ್ಯಕ್ಷರಾಗಿ, ಒಬ್ಬ ಸ್ನೇಜೀವಿಯಾಗಿದ್ದರು. ಅಂತವರು ನಮ್ಮನ್ನ ಅಗಲಿರುವುದು ಮನಸ್ಸಿಗೆ ನೋವು ತಂದಿದೆ ಎಂದರು.
ಗ್ರಾ.ಪಂ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜು ಮಾತನಾಡಿ, ಚಂದ್ರು ಅಕಾಲಿಕ ಸಾವು ನಮಗೆ ಮಾತ್ರವಲ್ಲ ಇಡೀ ತಾಲೂಕಿನ ಜನತೆಗೆ ನೋವು ತಂದಿದೆ. ಕೇವಲ 47 ವರ್ಷಕ್ಕೆ. ಇಷ್ಟು ಚಿಕ್ಕ ವಯಸ್ಸಿಗೆ ನಮ್ಮಿಂದ ದೂರವಾಗಿದ್ದು ಮರೆಯಲಾಗದ ವಿಷಯವೆಂದರು.

ರೈತ ಸಂಘದ ಜಿಲ್ಲಾಧ್ಯಾಕ್ಷ ಹೊಸೂರು ಕುಮಾರ್ ಮಾತನಾಡಿ, ಮೃತ ಚಂದ್ರು ತಾಲೂಕಿನಲ್ಲಿ ಎಲ್ಲರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿದ್ದ ಅವರು, ತಂದೆ ಶೆಟ್ಟಿಗೌಡರಂತೆ.ಗ್ರಾಮಾಂತರ ಭಾಗದಲ್ಲಿ ಅಜಾತಶತ್ರುವಾಗಿ ಮೂರು ಬಾರಿ ಗ್ರಾಮ ಪಂಚಾಯತಿ ಸದಸ್ಯರಾಗಿ ಒಂದು ಬಾರಿ ಅಧ್ಯಕ್ಷ ರಾಗಿ ಜನಪರ ಕೆಲಸಮಾಡಿದ್ದರು ಎಂದರು.

ಗ್ರಾ.ಪಂ. ಸದಸ್ಯ ಹಾಗೂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ಮಾತನಾಡಿ, ಎಲ್ಲಾ ಗ್ರಾಮ ಪಂ. ಸದಸ್ಯರೊಂದಿಗೆ ಒಡನಾಡಿಯಾಗಿಯಾಗಿದ್ದ ಅವರು. ನಮ್ಮನ್ನ ಅಗಲಿದ್ದು ಮನಸ್ಸಿಗೆ ಬೇಸವಾಗಿದ್ದು, ಅವರ ಕುಟುಂಬ ವರ್ಗಕ್ಕೆ ದೇವರು ನೋವನ್ನು ಭರಿಸುವ ಶಕ್ತಿ ನೀಡಲಿ ಎಂದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ರಮೇಶ್, ರಾಜು, ತಾ.ಪಂ ಮಾಜಿ ಸದಸ್ಯ ಪ್ರಸನ್ನ, ಪಿಡಿಓ ಜಯಶೀಲ, ಕಿರಜಾಜಿ ಗಜೇಂದ್ರ, ನಟರಾಜು, ಇಶಾಂತ್, ಇದ್ದರು.

RELATED ARTICLES
- Advertisment -
Google search engine

Most Popular